ಕುಂದಾಪುರದ ಚಿನ್ನದಂಗಡಿಯಲ್ಲಿ ಗ್ರಾಹಕ ಸೋಗಿನಲ್ಲಿ ಕಳ್ಳತನ
Friday, January 30, 2026
ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿ ಇರುವ ಎಸ್‌ಪಿಜಿ ಗೋಲ್ಡ್ ಆಂಡ್ ಡೈಮಂಡ್ ಅಂಗಡಿಯಲ್ಲಿ ಗ್ರಾಹಕನ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕಳವುಗೈದ ಘಟನೆ ನಡೆದಿದೆ.
ಶಿರೂರಿನ ಮುಹಮ್ಮದ್ ಕಾಸಿಮ್ ಅವರಿಗೆ ಸೇರಿದ ಅಂಗಡಿಗೆ ಸುಮಾರು 40 ವರ್ಷ ಪ್ರಾಯದ ವ್ಯಕ್ತಿ ಬಂದು ಚಿನ್ನದ ಸರವನ್ನು ತೋರಿಸುವಂತೆ ಕೇಳಿಕೊಂಡಿದ್ದ. ಅಂಗಡಿ ಸಿಬ್ಬಂದಿಯ ಗಮನ ತಪ್ಪಿಸಿ ಸುಮಾರು 9 ಗ್ರಾಂ ತೂಕದ, 1.25 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಕದ್ದೊಯ್ದಿದ್ದಾನೆ ಎಂದು ದೂರಲಾಗಿದೆ. ಈ ಸಂಬOಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.