ಗಾಳಿ ಮಳೆಗೆ ಉಡುಪಿ ಸ್ವಾಗತ ಕಮಾನಿಗೆ ಹಾನಿ: ಅನಾಹುತಕ್ಕೂ ಮುನ್ನ ತೆರವಿಗೆ ಆಗ್ರಹ
Wednesday, May 13, 2026
ರಾತ್ರೀ ಸುರಿದ ಭಾರೀ ಗಾಳಿ ಮಳೆಗೆ ಉಡುಪಿಯ ರಾಷ್ಟ್ರೀಯ ಹೆದ್ದಾರಿಗೆ ಅಳವಡಿಸಿರುವ ಕಾರ್ಯಕ್ರಮವೊಂದರ ಸ್ವಾಗತ ಕಮಾನಿಗೆ ಹಾನಿಯಾಗಿದ್ದು, ಬೀಳುವ ಸ್ಥಿತಿಯಲ್ಲಿದೆ.
ವಾಹನ ಸಂಚಾರ ಹಾಗೂ ಜನ ನಿಬಿಡ ಪ್ರದೇಶದಲ್ಲಿ ವಾಲಿಕೊಂಡಿರುವ ಕಮಾನಿನಿಂದ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಬಿದ್ದು ಅನಾಹುತವಾಗುವ ಮೊದಲು ಸಂಬಂಧಪಟ್ಟವರು ಇದನ್ನು ತೆರವುಗೊಳಿಸಬೇಕೆಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಒತ್ತಾಯಿಸಿದ್ದಾರೆ.