-->
 ಫೆ.6ಕ್ಕೆ ರಾಜ್ಯಾದ್ಯಂತ “ಕರಿಕಾಡ”‘ಸಿನಿಮಾ ಬಿಡುಗಡೆ

ಫೆ.6ಕ್ಕೆ ರಾಜ್ಯಾದ್ಯಂತ “ಕರಿಕಾಡ”‘ಸಿನಿಮಾ ಬಿಡುಗಡೆ


ಆಕ್ಷನ್ ಥ್ರಿಲ್ಲರ್ ಹಾಗೂ ಮ್ಯೂಸಿಕಲ್ ಜರ್ನಿ & ಅಡ್ವೆಂಚರಸ್ ಎಲಿಮೆಂಟ್ಸ್ ಹೊಂದಿರುವ  ಕರಿಕಾಡ ಸಿನಿಮಾ ಫೆ.6ರಂದು ಕರ್ನಾಟಕ ರಾಜ್ಯದಾದ್ಯಂತ ನೂರು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಟ ಕಾಡ ನಟರಾಜ್ ತಿಳಿಸಿದ್ದಾರೆ. 

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ನಾಯಕಿಯಾಗಿ ತುಳು ಸಿನಿಮಾಗಳಲ್ಲಿ ನಟಿಸಿರುವ ನಿರೀಕ್ಷಾ ಶೆಟ್ಟಿ ನಟಿಸಿದ್ದಾರೆ. ಯಶ್ ಶೆಟ್ಟಿ, ರಾಜು ಬೆಳವಾಡಿ, ದಿ.ರಾಕೇಶ್ ಪೂಜಾರಿ, ಚಂದ್ರಪ್ರಭಾ ಮತ್ತಿತರರು ನಟಿಸಿದ್ದಾರೆ ಎಂದು ಮಾಹಿತಿ ನೀಡಿದರು. ಕಳಸ, ಕುದ್ರೆಮುಖ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಚನ್ನಪಟ್ಟಣದಲ್ಲಿ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಕರಿ ಅಂದ್ರೆ ಆನೆ, ಕಾಡ ಅಂದ್ರೆ ನಾಯಕನ ಹೆಸರು ಎಂದು ಮಾಹಿತಿ ನೀಡಿದರು. 

ಚಿತ್ರದ ನಿರ್ಮಾಪಕಿ ದೀಪ್ತಿ ದಾಮೋದರ್ ಮಾತಾಡಿ, ಸಿನಿಮಾದಲ್ಲಿ ಎಲ್ಲರೂ ಕಷ್ಟಪಟ್ಟು ನಟಿಸಿದ್ದಾರೆ. ನಾವೆಲ್ಲರೂ ಸಿನಿಮಾ ನೋಡಲು ಉತ್ಸುಕರಾಗಿದ್ದೇವೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು. 

ಚಿತ್ರಕ್ಕೆ ಸಂಭಾಷಣೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಕೆ. ವೆಂಕಟೇಶ್ ಮಾತಾಡಿ, ಸಿನಿಮಾದಲ್ಲಿ ಒಟ್ಟು 7 ಹಾಡುಗಳಿದ್ದು 6 ಹಾಡುಗಳನ್ನು ನಾನೇ ಬರೆದಿದ್ದೇನೆ. ಎಲ್ಲ ಹಾಡುಗಳು ಕೂಡ ಚೆನ್ನಾಗಿ ಮೂಡಿಬಂದಿದ್ದು 60 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವ ಕಂಟೆOಟ್ ಸಿನಿಮಾದಲ್ಲಿದ್ದು ಜನರು ಇಷ್ಟಪಡುವುದರಲ್ಲಿ ಎರಡು ಮಾತಿಲ್ಲ ಎಂದರು. 

ನಟಿ ನಿರೀಕ್ಷಾ ಶೆಟ್ಟಿ ಮಾತಾಡಿ, ನನ್ನ ಮೊದಲ ಕನ್ನಡ ಸಿನಿಮಾ ಇದಾಗಿದೆ. ಮೊದಲನೇ ಶೋ ಮಂಗಳೂರಲ್ಲಿ ನಡೆಯುತ್ತಿರುವುದು ಇನ್ನಷ್ಟು ಖುಷಿ. ನನ್ನ ಕೆರಿಯರ್ ಗೆ ಇದು ಒಳ್ಳೆಯ ಬ್ರೇಕ್ ನೀಡುವ ವಿಶ್ವಾಸವಿದೆ ಎಂದರು.  ಸುದ್ದಿಗೋಷ್ಟಿಯಲ್ಲಿ ವಿತರಕ ಬಾಲಕೃಷ್ಣ ಶೆಟ್ಟಿ ಪುತ್ತೂರು ಉಪಸ್ಥಿತರಿದ್ದರು.

‘ಕರಿಕಾಡ’ ಇದೊಂದು ಆಕ್ಷನ್ ಥ್ರಿಲ್ಲರ್ ಹಾಗೂ ಮ್ಯೂಸಿಕಲ್ ಜರ್ನಿ & ಅಡ್ವೆಂಚರಸ್ ಎಲಿಮೆಂಟ್ಸ್ ಹೊಂದಿರುವ ಸಿನಿಮಾ. ಬಣ್ಣದ ಲೋಕದ ಕನಸು ಹೊತ್ತು ಕಾಡ ನಟರಾಜ್ ‘ಕರಿಕಾಡ’ ಚಿತ್ರದ ಮೂಲಕ ಪ್ರೇಕ್ಷಕರ ಆಶೀರ್ವಾದ ಗಿಟ್ಟಿಸಿಕೊಳ್ಳಲು ಬರುತ್ತಿದ್ದಾರೆ. ಕಾಡ ನಟರಾಜ್ ಈ ಸಿನಿಮಾದ ನಾಯಕರಾಗಿದ್ದು ಸದಾ ಚಿತ್ರಜಗತ್ತಿನ ಕನಸು ಕಾಣುತ್ತಾ ಐಟಿ ವಲಯದಲ್ಲಿ ಮಾರ್ಕೆಟಿಂಗ್ ಮತ್ತು ಬ್ರ‍್ಯಾಂಡಿOಗ್ ಕೆಲಸ ಮಾಡ್ತಿರೋ ಕಲಾವಿದ. ರಿದ್ಧಿ ಎಂಟರ್ಟೈನ್ಮೆOಟ್ಸ್ ಬ್ಯಾನರ್ ನಡಿ ಕಾಡ ನಟರಾಜ್ ಅವರ ಪತ್ನಿ ದೀಪ್ತಿ ದಾಮೋದರ್ ತನ್ನ ಗಂಡನ ಕನಸಿನ ಗುರಿಗೆ ದಾರಿ ತೋರಿಸಿದ್ದಾರೆ. ಈ ದಾರಿಗೆ ಸ್ನೇಹಿತರಾದ ರವಿಕುಮಾರ್ ಎಸ್.ಆರ್ ಸಹ ನಿರ್ಮಾಣದ ಸಾಥ್ ನೀಡಿದ್ದಾರೆ. ಚಿತ್ರಕಥೆ ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಕೆ.ವೆಂಕಟೇಶ್ ಹೊತ್ತಿದ್ದಾರೆ. ಕರಿಕಾಡ ಕನ್ನಡದ ಜೊತೆಗೆ ತೆಲುಗು, ತಮಿಳ್, ಹಿಂದಿ, ಹಾಗೂ ಮಲಯಾಳಂ ನಲ್ಲೂ ಸಹ ಚಿತ್ರ ಬಿಡುಗಡೆಯಗುತ್ತಿದ್ದು, ಇದೆ ಫೆಬ್ರವರಿ 6ಕ್ಕೆ  ರಾಜ್ಯಾದಂತ ಚಿತ್ರಮಂದಿರಕ್ಕೆ ಲಗ್ಗೆ ಇಡಲು ಸಜ್ಜಾಗಿದೆ. 

 

Ads on article

Advertise in articles 1

advertising articles 2

Advertise under the article