ಫೆ. 6ರಂದು ನಾನ್ವೆಜ್ ತುಳು ಚಿತ್ರ ಬಿಡುಗಡೆ
Sunday, February 01, 2026
ಹಾಸ್ಯ ಮನರಂಜನೆಯಿಂದಲೇ ಪ್ರೇಕ್ಷಕರನ್ನು ತಲುಪುವ ತುಳು ಚಿತ್ರರಂಗಕ್ಕೆ ಮತ್ತೊಂದು ಹಾಸ್ಯ ಚಿತ್ರ ಸೇರ್ಪಡೆಯಾಗುತ್ತಿದೆ. ಅದುವೇ ನಾನ್ ವೆಜ್. ಪೆಬ್ರವರಿ 6 ರಂದು ತುಳು ಮತ್ತು ಕನ್ನಡ ಭಾಷೆಯಲ್ಲಿ ರಾಜ್ಯದಾದ್ಯಂತ ತೆರೆ ಕಾಣಲಿದೆ
ತುಳು ಚಿತ್ರ ರಂಗದಲ್ಲಿ 500 ದಿನಗಳ ದಾಖಲೆಯ ಪ್ರದರ್ಶನ ಕಂಡಿರುವ ಚಾಲಿ ಪೊಲೀಲು ಚಿತ್ರದ ನಿರ್ಮಾಪಕ ಪ್ರಕಾಶ್ ಪಾಂಡೆಶ್ವರ ಮತ್ತು ಕೊಸ್ಟಲ್ ವುಡ್ ಗೆ ಎಕ್ಕಸಕ ಹಾಗೂ ಪಿಲಿಬೈಲ್ ಯಮುನಕ್ಕದಂತಹ ಸೂಪರ್ ಹಿಟ್ ಚಿತ್ರ ನಿರ್ದೇಶಿಸಿದ ಸುರಾಜ್ ಶೆಟ್ಟಿ ಇವರ ಕಾಂಬಿನೆಷನ್ ನಲ್ಲಿ ತಯಾರಾಗಿರುವ 100% ಕಾಮಿಡಿ ಎಂಟರ್ ಟ್ರೈನ್ ಮೆಂಟ್ ಚಿತ್ರ. ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ ಅಥರ್ವ ಪ್ರಕಾಶ್ ಈ ಚಿತ್ರದಲ್ಲಿ ಮುಗ್ದ ಯುವಕನಾಗಿ, ಲವರ್ ಬಾಯ್ ಆಗಿ, ಹೀಗೆ ಪ್ರಾರಂಭದಿಂದ ಮುಕ್ತಾಯದವರೆಗೂ ಉತ್ತಮವಾದ ಅಭಿನಯ ನೀಡಿದ್ದಾರೆ. ಇನ್ನು ಈಗಾಗಲೇ ಸು ಪ್ರಮ್ ಸೋ, ಕಾಂತಾರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊದಲಾದ ಚಿತ್ರಗಳಲ್ಲಿ ರಂಜಿಸಿದ ದೀಪಕ್ ರೈ ಪಾಣಾಜೆ, ನವೀನ್ ಪಡೀಲ್,ಪ್ರಕಾಶ್ ತುಮಿನಾಡ್, ಪುಷ್ಪರಾಜ್ ಬೊಳ್ಳರ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಇಡೀ ಚಿತ್ರ ನಗೆ ನಗೆ ಯೊಂದಿಗೆ ಆರೋಗ್ಯ ಪೂರ್ಣ ಹಾಸ್ಯದೊಂದಿಗೆ ಸಾಗುತ್ತದೆ.