ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ರೈಲು ವ್ಯವಸ್ಥೆ
Tuesday, February 03, 2026
ಮಹಾಶಿವರಾತ್ರಿ ಹಬ್ಬದ ವೇಳೆ ಜನರ ಅವಶ್ಯಕತೆಗೆ ಅನುಗುಣವಾಗಿ ಯಶವಂತಪುರ- ಮಡಗಾಂವ್ ಜಂಕ್ಷನ್- ಯಶವಂತಪುರ ನಡುವೆ ಕೊಂಕಣ ರೈಲ್ವೆಯ ಸಹಯೋಗದೊಂದಿಗೆ ನೈರುತ್ಯ ರೈಲ್ವೆ ವಿಶೇಷ ರೈಲನ್ನು ಓಡಿಸಲು ನಿರ್ಧರಿಸಿದೆ.
ರೈಲು ನಂ.06507 ಯಶವಂತಪುರ- ಮಡಗಾಂವ್ ಜಂಕ್ಷನ್ ಎಕ್ಸ್ಪ್ರೆಸ್ ವಿಶೇಷ ರೈಲು ಫೆ.13ರಂದು ಶುಕ್ರವಾರ ಅಪರಾಹ್ನ 12:30ಕ್ಕೆ ಯಶವಂತಪುರ ದಿಂದ ಹೊರಟು ಮರುದಿನ ಮುಂಜಾನೆ 6:45ಕ್ಕೆ ಮಡಗಾಂವ್ ತಲುಪಲಿದೆ. ರೈಲು ನಂ.06508 ಮಡಗಾಂವ್ ಜಂಕ್ಷನ್- ಯಶವಂತಪುರ ಎಕ್ಸ್ಪ್ರೆಸ್ ರೈಲು ಫೆ.16ರ ಸೋಮವಾರ ಬೆಳಗ್ಗೆ 11 ಗಂಟೆಗೆ ಮಡಗಾಂವ್ ಜಂಕ್ಷನ್‌ನಿAದ ಹೊರಟು ಮರುದಿನ ಮುಂಜಾನೆ 4:45ಕ್ಕೆ ಯಶವಂತಪುರ ತಲುಪಲಿದೆ.