ಬೋಟಿನಿಂದ ಕಾಲುಜಾರಿ ಬಿದ್ದು ಮೀನುಗಾರ ಸಾವು
Thursday, February 05, 2026
ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ಮೀನುಗಾರನೊಬ್ಬ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಬಾಳ್ಳುದ್ರು ಗ್ರಾಮದ ಹಂಗಾರಕಟ್ಟೆಯಲ್ಲಿ ನಡೆದಿದೆ. ಮಣೂರು ಗ್ರಾಮದ ನಿವಾಸಿ ನಟರಾಜ್ (36)ಮೃತಪಟ್ಟವರು.
ಹಂಗಾರಕಟ್ಟೆ ಸಮೀಪ ನಿಲುಗಡೆಯಾಗಿದ್ದ ಈಶ್ವರಿ ಎಂಬ ಮೀನುಗಾರಿಕಾ ಬೋಟಿನಲ್ಲಿ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಕೊಂಡಿದ್ದ ನಟರಾಜ್ ರಾತ್ರಿ ಊಟ ಮುಗಿಸಿ ಕೈ ತೊಳೆಯುವ ಸಂದರ್ಭದಲ್ಲಿ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ನಟರಾಜ್ ನೀರಿಗೆ ಬಿದ್ದ ತಕ್ಷಣ ಸಹಕಾರ್ಮಿಕರು ಅವರಿಗಾಗಿ ತೀವ್ರ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರೆತಿರಲಿಲ್ಲ. ಬೆಳಿಗ್ಗೆ ಬೋಟು ನಿಲುಗಡೆಗೊಳಿಸಿದ್ದ ಸ್ಥಳದ ಸಮೀಪವೇ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಸಂಬAಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.