ಕಸಾಪ ಉಡುಪಿ ತಾಲೂಕು ಘಟಕದ ಸಮಾಲೋಚನಾ ಸಭೆ
Monday, February 02, 2026
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ 16ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಏಪ್ರಿಲ್ ತಿಂಗಳಿನಲ್ಲಿ ನಡೆಸುವುದೆಂದು ನಿರ್ಣಯಿಸಿದ್ದು, ಈ ಸಂಬOಧ ಉಡುಪಿ ಮಥುರಾ ಕಂಫರ್ಟ್ ನಲ್ಲಿ ಉಡುಪಿ ತಾಲೂಕು ಘಟಕಾಧ್ಯಕ್ಷ ರವಿರಾಜ್ ಹೆಚ್ ಪಿ. ಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಸಮ್ಮೇಳನದ ಅಧ್ಯಕ್ಷತೆಗೆ ಸುಮಾರು 8 ಹೆಸರುಗಳು ಸಭೆಯಲ್ಲಿ ಬಂದಿದ್ದು ಮುಂದಿನ ವಾರದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಲಾಯಿತು. ಉಡುಪಿ ತಾಲೂಕು ಈಗಿನ ಸಮಿತಿಯ ಅಧಿಕಾರದವಧಿಯಲ್ಲಿ ಇದು 4ನೇ ಸಮ್ಮೇಳನ ವಾಗಿದ್ದು, ಉಡುಪಿ ತಾಲೂಕಿನ 16ನೇ ಸಮ್ಮೇಳನ ಜರಗಲಿದೆ. ಬಹಳ ಅದ್ದೂರಿಯಿಂದ ಸಮ್ಮೇಳನ ನಡೆಯಲಿದ್ದು, ವಿವಿಧ ವಿಚಾರ ಗೋಷ್ಠಿಗಳು, ಪುಸ್ತಕಗಳ ಲೋಕಾರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಮುಂತಾದ ಹತ್ತು ಹಲವು ಕಾರ್ಯಕ್ರಮಗಳು ನಡೆಸಲು ನಿರ್ಣಯಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ಆಸ್ಟ್ರೋ ಮೋಹನ್, ರಾಘವೇಂದ್ರ ಪ್ರಭು ಕರ್ವಾಲ್, ರಮಾನಂದ, ವಿದ್ಯಾ ಸರಸ್ವತಿ, ದೀಪಾ ಕರ್ಕಿ, ಸಿದ್ದ ಬಸಯ್ಯ ಸ್ವಾಮಿ ಚಿಕ್ಕಮಠ, ಸುಭೋದ್, ಉಮೇಶ್ ಆಚಾರ್ಯ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ಸ್ವಾಗತಿಸಿದರು. ಉಡುಪಿ ತಾಲೂಕು ಅಧ್ಯಕ್ಷ ರವಿರಾಜ ಎಚ್. ಪಿ ಪ್ರಸ್ತಾಪಿಸಿದರು.
ಗೌರವ ಕಾರ್ಯದರ್ಶಿ ರಂಜನಿ ವಸಂತ್ ನಿರೂಪಿಸಿದರು. ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು.
