ಎ. 1: ಉಚಿತ ಶ್ರವಣ ತಪಾಸಣೆ, ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ
Monday, March 30, 2026
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಡುಪಿ ಜಿಲ್ಲೆ, ಬಿ.ಜೆ.ಪಿ ಹಿಂದುಳಿದ ವರ್ಗಗಳ ಮೋರ್ಚ ಉಡುಪಿ ನಗರ, ಲಯನ್ಸ್ ಕ್ಲಬ್ ಪರ್ಕಳ (317 ಸಿ) ಹಾಗೂ ದಿವ್ಯಾಂಗ ರಕ್ಷಣ ಸಮಿತಿ ಉಡುಪಿ ಜಿಲ್ಲೆ ಇದರ ಜಂಟಿ ಸಹಯೋಗದಲ್ಲಿ ಉಚಿತ (ಕಿವಿ) ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಹಾಗೂ ವಿತರಣೆ ಕಾರ್ಯಕ್ರಮವು ಎ.1ರಂದು ಮಲ್ಪೆ ಸಭಾಭವನದಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕೆ. ವಿಜಯ ಕೊಡವೂರು ತಿಳಿಸಿದ್ದಾರೆ.
ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಎ.1ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಶಿಬಿರವು ನಡೆಯಲಿದ್ದು, ಮೊದಲು ಕರೆ ಮಾಡಿ ನೋಂದಾಯಿಸುವ 30 ಮಂದಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಹಿರಿಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ದೇಣಿಗೆ ಮೊತ್ತದಿಂದ ಶ್ರವಣ ಸಾಧನದ 40% ಮೊತ್ತವನ್ನು ಪಾವತಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9743581798 ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್ ಹಾಗೂ ಕೋಶಾಧಿಕಾರಿ ರಾಜೇಂದ್ರ ಪಂದುಬೆಟ್ಟು ಉಪಸ್ಥಿತರಿದ್ದರು.