-->
ಉಡುಪಿಗೆ  ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ. ವೀರಭದ್ರಯ್ಯ ಭೇಟಿ

ಉಡುಪಿಗೆ ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ. ವೀರಭದ್ರಯ್ಯ ಭೇಟಿ


ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಡಾ. ವೀರಭದ್ರಯ್ಯ ಅವರು ಉಡುಪಿ ಕರಾವಳಿ ಶಾಖೆಗೆ ಭೇಟಿ ನೀಡಿದರು. 

ಐಎಂಎ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಡಾ. ವೀರಭದ್ರಯ್ಯ ಅವರು, ವೈದ್ಯರ ಬೇಡಿಕೆ, ಸರಕಾರದ ಸ್ಪಂದನೆ ಸೇರಿದಂತೆ ಹೊಸ ವೈದ್ಯರು ಭಾರತೀಯ ವೈದ್ಯಕೀಯ ಸಂಘದ ಸದಸ್ಯತ್ವವನ್ನು ಹೆಚ್ಚಿನ ರೀತಿಯಲ್ಲಿ ಪಡೆದುಕೊಳ್ಳಬೇಕಾಗಿ ಕರೆನೀಡಿದರು. 

ರಾಜ್ಯ ಉಪಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಮಾತನಾಡಿ, ಸಂಘಕ್ಕಾಗಿ ಶ್ರಮಿಸುವ ಸದಸ್ಯರನ್ನು ಶ್ಲಾಘಿಸಿದರು. ವಿಭಾಗೀಯ ಸಂಯೋಜಕ ಡಾ. ಜಿ. ಕೆ. ಭಟ್  ಅವರು ಶಾಖೆಯಯಲ್ಲಿ ಚಟುವಟಿಕೆಗಳನ್ನು ಮಾಡುತ್ತಾ, ಶಾಖೆಯ ಒಳಿತಿಗಾಗಿ ಶ್ರಮಿಸುವಂತೆ ಹೇಳಿದರು. 

ಸಹಾಯಕ ಕಾರ್ಯದರ್ಶಿ ಡಾ. ಮಹೇಶ್,  ಉಡುಪಿ ಜಿಲ್ಲೆಯ ಸಂಯೋಜಕ ಡಾ. ಉಮೇಶ್ ಪುತ್ರನ್ ಮತ್ತು ಉಡುಪಿ ಕರಾವಳಿ ಶಾಖೆಯ ಉಪಾಧ್ಯಕ್ಷ ಮತ್ತು ಲೇಡೀಸ್ ವಿಂಗ್ ಅಧ್ಯಕ್ಷೆ ಡಾ. ವಿಜಯ.ವೈ.ಬಿ ಉಪಸ್ಥಿತರಿದ್ದರು. ಶಾಖೆಯ ಅಧ್ಯಕ್ಷರಾದ ಡಾ. ಅಶೋಕ್ ಕುಮಾರ್ ಸ್ವಾಗತಿಸಿ, ಕೋಶಾಧಿಕಾರಿ ಡಾ. ಸನತ್ ರಾವ್ ವಂದಿಸಿದರು. ಕಾರ್ಯದರ್ಶಿ ಡಾ. ಮಾನಸ್.ಇ.ಆರ್ ಕಾರ್ಯಕ್ರಮ ನಿರೂಪಿಸಿದರು. 

Ads on article

Advertise in articles 1

advertising articles 2

Advertise under the article