-->
ಹಿರಿಯಡ್ಕದ ಶೀರೂರು ಮೂಲಮಠಕ್ಕೆ  ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ಭೇಟಿ

ಹಿರಿಯಡ್ಕದ ಶೀರೂರು ಮೂಲಮಠಕ್ಕೆ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ಭೇಟಿ


ಉತ್ತರಾದಿ ಮಠದ ಪೀಠಾಧಿಪತಿಗಳಾದ  ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹಿರಿಯಡ್ಕ ಸಮೀಪದ ಶೀರೂರು ಮೂಲ ಮಠಕ್ಕೆ ಭೇಟಿ ನೀಡಿದರು. 


ಬಳಿಕ ರಾಮದೇವರು ಹಾಗೂ ಮುಖ್ಯಪ್ರಾಣ ದೇವರ ದರ್ಶನ ಮಾಡಿದರು. ಈ ಸಂದರ್ಭದಲ್ಲಿ ಶೀರೂರು ಮಠದ ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೆಕಾರು ಹಾಗೂ ಮೂಲ ಮಠದ ಅರ್ಚಕರಾದ ಪ್ರಕಾಶ್ ಭಟ್ ಶ್ರೀಗಳನ್ನು ಸ್ವಾಗತಿಸಿದರು. ಈ  ವೇಳೆ ಶೀರೂರು ಮೂಲ ಮಠದ ವ್ಯವಸ್ಥಾಪಕರಾದ ಅಜಯ್ ಭಟ್ ಹಾಗೂ ಶೀರೂರು ಮಠದ ಪುರೋಹಿತರಾದ ಸುದರ್ಶನ್ ಆಚಾರ್ಯ ಕಲ್ಯ ಹಾಗೂ ಉಡುಪಿ ಉತ್ತರಾದಿ ಮಠದ ವ್ಯವಸ್ಥಾಪಕರಾದ ಪ್ರಕಾಶ್ ಆಚಾರ್ಯ ಹಾಗೂ ಉಭಯ ಮಠಗಳ ಶಿಷ್ಯವರ್ಗದವರು ಉಪಸ್ಥಿತರಿದ್ದರು.




Ads on article

Advertise in articles 1

advertising articles 2

Advertise under the article