ಶ್ರೀ ಮಂಜುನಾಥ ಮೋಟರ್ಸ್ ನ ಪಾಲುದಾರ ರಾಜಶೇಖರ ಶೆಟ್ಟಿ ನಿಧನ
Sunday, April 26, 2026
ಉಡುಪಿಯ ಶ್ರೀ ಮಂಜುನಾಥ ಮೋಟರ್ಸ್ ನ ಪಾಲುದಾರ ಕೆ. ರಾಜಶೇಖರ ಶೆಟ್ಟಿ ಅವರು ಅಲ್ಪ ಕಾಲದ ಅಸೌಖ್ಯದ ಬಳಿಕ ಎ. 25, ಶನಿವಾರ ರಾತ್ರಿ ಬುಡ್ನಾರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಹಲವು ಸಾರಿಗೆ ಬಸ್ಸುಗಳ ಮಾಲಕರಾಗಿದ್ದ ರಾಜಶೇಖರ ಶೆಟ್ಟಿ ಅವರು ಇಂದ್ರಾಳಿ ರೈಲ್ವೇ ಸ್ಟೇಶನ್ ಗೆ ಹೋಗುವ ದಾರಿಯಲ್ಲಿ ಮಾರುತಿ ಕಾರು ಸರ್ವಿಸ್ ಸ್ಟೇಷನ್ ಮಾಲಕರಾಗಿದ್ದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಇಂದು (ಭಾನುವಾರ) ಪೂರ್ವಾಹ್ನ 11ಗಂಟೆ ಬಳಿಕ ಬುಡ್ನಾರಿನಲ್ಲಿರುವ ಅವರ ಸ್ವಗೃಹದಲ್ಲಿ ನಡೆಯಲಿದೆ.