ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಮಹಾ ರುದ್ರಯಾಗದ ಮಾಹಿತಿ ಕಚೇರಿ ಉದ್ಘಾಟನೆ
Thursday, April 23, 2026
ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಮೇ 14ರಿಂದ ಮೇ 20ರವರೆಗೆ ನಡೆಯಲಿರುವ ಮಹಾ ರುದ್ರಯಾಗದ ಮಾಹಿತಿ ಕಚೇರಿಯನ್ನು ಉಡುಪಿ ನಗರ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೆರೂರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಈ ಪುಣ್ಯ ಕಾರ್ಯದಲ್ಲಿ ಭಗವದ್ ಭಕ್ತರೆಲ್ಲರೂ ಪಾಲ್ಗೊಳ್ಳುವ ಮೂಲಕ ಎಲ್ಲರ ಬಾಳು ಹಸನಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಕೊಡವೂರು , ಮಹಾರುದ್ರ ಯಾಗದ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್, ಕೃಷ್ಣ ಮೂರ್ತಿ ಆಚಾರ್ಯ, ಸಂಚಾಲಕರಾದ ಡಾ. ವಿಜೆಯೇಂದ್ರ ವಸಂತ್, ಶಂಕರನಾರಾಯಣ ಭಕ್ತವೃಂದ ಅಧ್ಯಕ್ಷ ತೋಟದಮನೆ ದಿವಾಕರ ಶೆಟ್ಟಿ, ಸುಕನ್ಯಾ ಪೂಜಾರಿ, ರಮೇಶ್ ತಿಂಗಳಾಯ, ನಂದಕಿಶೋರ್ , ಸೀತಾರಾಮ ಆಚಾರ್ಯ, ವಾದಿರಾಜ್ ಸಾಲ್ಯಾನ್, ಸೇವಾಸಮಿತಿ ಪ್ರಧಾನ ಕಾರ್ಯದರ್ಶಿ ಜನಾರ್ದನ್ ಕೊಡವೂರು, ಶ್ರೀದೇವಳದ ಉಮೇಶ್ ರಾವ್ ಉಪಸ್ಥಿತರಿದ್ದರು.