-->
ಲಲಿತಾ ಕಲಾ ಅಕಾಡೆಮಿಯ ವರ್ಣಶ್ರೀ ಪ್ರಶಸ್ತಿಗೆ ಫೋಕಸ್ ರಾಘು ಆಯ್ಕೆ

ಲಲಿತಾ ಕಲಾ ಅಕಾಡೆಮಿಯ ವರ್ಣಶ್ರೀ ಪ್ರಶಸ್ತಿಗೆ ಫೋಕಸ್ ರಾಘು ಆಯ್ಕೆ



ಛಾಯಾಗ್ರಹಣದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಉಡುಪಿಯ ಫೋಕಸ್ ರಾಘು ಅವರಿಗೆ ಮತ್ತೊಂದು ಗೌರವ ಲಭಿಸಿದೆ. ಲಲಿತಾ ಕಲಾ ಅಕಾಡೆಮಿಯ ವರ್ಣಶ್ರೀ ಪ್ರಶಸ್ತಿಗೆ ಫೋಕಸ್ ರಾಘು ಆಯ್ಕೆಯಾಗಿದ್ದಾರೆ. 

ಉಡುಪಿಯ ಕೊಡಂಗಳ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿ, ಬೆಳೆದ ರಾಘವೇಂದ್ರ ಕೊಡಂಗಳ ಇಂದು ಫೋಕಸ್ ರಾಘು ಎಂಬ ಹೆಸರಿನಲ್ಲಿ  ಪ್ರಸಿದ್ಧರು. ಛಾಯಾಗ್ರಹಣ ಕ್ಷೇತ್ರದಲ್ಲಿ ಮುನ್ನೂರಕ್ಕೂ ಹೆಚ್ಚು ರಾಷ್ಟ್ರ, ಅಂತರಾಷ್ಟ್ರೀಯ ಪ್ರಶಸ್ತಿ ಪಡೆದವರು. 25 ಕ್ಕೂ ಹೆಚ್ಚು ದೇಶಗಳ ಛಾಯಾಚಿತ್ರ ಸ್ಪರ್ಧೆಯಲ್ಲಿ ಬಹುಮಾನಗಳಿಸಿ ಫ್ರಾನ್ಸ್ ದೇಶ ಕೊಡಮಾಡುವ EFIAP ಮತ್ತು ಫೆಡರೇಶನ್ ಆಫ್ ಇಂಡಿಯನ್ ಫೋಟೋಗ್ರಫಿ ಕೊಡಮಾಡುವ EFIP ಡಿಸ್ಟಿಂಕ್ಷನ್ ಗಳಿಸಿರುತ್ತಾರೆ.
ಇವರ ಕಲಾತ್ಮಕ ಛಾಯಾಚಿತ್ರಗಳು ಭಾರತ, ಫ್ರಾನ್ಸ್, ಸಿಂಗಾಪುರ್, ಇಂಗ್ಲೆಂಡ್, ಗ್ರೀಕ್, ಕೆನಡಾ, ಚೀನಾ, ಅಮೇರಿಕಾ ದೇಶಗಳಲ್ಲಿ ಪ್ರದರ್ಶನಗೊಂಡಿವೆ. ಮದುವೆ ಛಾಯಾಗ್ರಹಣದಲ್ಲಿ ವಿನೂತನ ಪ್ರಯೋಗಗಳೊಂದಿಗೆ ಸಾಧನೆ ಮೆರೆದಿರುವ ಫೋಕಸ್ ರಾಘು  ಅತ್ಯದ್ಭುತ ಪ್ರಿವೆಡ್ಡಿಂಗ್ ಫೋಟೋ ಶೂಟ್ ಮೂಲಕ ಮನೆಮಾತಾಗಿದ್ದಾರೆ. ಅದರ ಜೊತೆಗೆ ತನ್ನ ಹವ್ಯಾಸವಾಗಿ ರೂಢಿಸಿಕೊಂಡ ವನ್ಯಜೀವಿ ಛಾಯಾಗ್ರಹಣ, ಪ್ರವಾಸ, ಚಾರಣದ ಫೋಟೋಗಳು ವಿಶ್ವವಿಖ್ಯಾತಿಗಳಿಸಿವೆ. 

ರಾಘು ಅವರ ಸಾಧನೆಗಳನ್ನು ಗುರುತಿಸಿ  ಕರ್ನಾಟಕ ರಾಜ್ಯಕ್ಕೆ Nikon Influencer ಆಗಿ ನೇಮಕ ಮಾಡಿ ಅವರ ಪ್ರತಿಭೆಗೆ ಗೌರವ ನೀಡಿದೆ. ಇವರು ಬಿ.ಕಾಂ ಪದವೀಧರರು. ಗ್ರಾಮೀಣ ಬದುಕನ್ನು ಎತ್ತಿ ಹಿಡಿಯುವ ನೆರಳು ಬೆಳಕಿನ ಪಿಕ್ಟೋರಿಯಲ್ ಛಾಯಾಚಿತ್ರ ಫೋಕಸ್ ರಾಘು ಅವರ ಪ್ರೀತಿಯ ಕ್ಷೇತ್ರ. ಇವರು ಖ್ಯಾತ ಛಾಯಾಗ್ರಾಹಕ ಗುರುದತ್ ಕಾಮತ್ ಅವರ ಶಿಷ್ಯ.

Ads on article

Advertise in articles 1

advertising articles 2

Advertise under the article