-->
ಚಿನ್ನದ ಕೆಲಸಗಾರ, ಸರಾಫ ದಾಮೋದರ ಆಚಾರ್ಯ ನಿಧನ

ಚಿನ್ನದ ಕೆಲಸಗಾರ, ಸರಾಫ ದಾಮೋದರ ಆಚಾರ್ಯ ನಿಧನ


ಚಿನ್ನದ ಕೆಲಸಗಾರ, ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಸರಾಫರಾಗಿದ್ದ ಮಾರ್ಪಳ್ಳಿ ನಿವಾಸಿ ದಾಮೋದರ ಆಚಾರ್ಯ (71) ಅವರು ಅಲ್ಪ ಕಾಲದ ಅಸೌಖ್ಯದ ಬಳಿಕ ಸೋಮವಾರ ನಿಧನರಾದರು.

ಕೆಲ ವರ್ಷಗಳ ಕಾಲ ಅಲೆವೂರು ಗುಡ್ಡೆಯಂಗಡಿಯಲ್ಲಿ ಚಿನ್ನದ ಅಂಗಡಿ ಇಟ್ಟಿದ್ದ ಅವರು ಕೊರಂಗ್ರಪಾಡಿ ಸೊಸೈಟಿ, ಯೂನಿಯನ್ ಬ್ಯಾಂಕ್ ಸಹಿತ ಹಲವಾರು ಹಣಕಾಸು ಸಂಸ್ಥೆಗಳಲ್ಲಿ ಚಿನ್ನ ಮೌಲ್ಯಮಾಪಕರಾಗಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದರು. 

ಕೆಲವು ವರ್ಷಗಳಿಂದ ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದ ಪಿಗ್ಮಿ ಏಜೆಂಟರಾಗಿಯೂ ಸೇವೆ ಸಲ್ಲಿಸಿದ್ದರು. 

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Ads on article

Advertise in articles 1

advertising articles 2

Advertise under the article