ಲೆಕ್ಕ ಪರಿಶೋಧಕ ಕುಕ್ಕಿಕಟ್ಟೆ ದೀಪಕ್ ಶೆಣೈ ನಿಧನ
Tuesday, April 14, 2026
ಉಡುಪಿ ಕುಕ್ಕಿಕಟ್ಟೆಯ ದಿ. ಮರ್ತಪ್ಪ ಶೆಣೈ ಅವರ ಪ್ರಥಮ ಪುತ್ರ, ಲೆಕ್ಕ ಪರಿಶೋಧಕ ದೀಪಕ್ ಶೆಣೈ ಅವರು ಇಂದು ಹೃದಯಾಘಾತದಿಂದ ನಿಧನರಾದರು.
ಅವರಿಗೆ 47 ವರ್ಷ ವಯಸ್ಸಾಗಿತ್ತು. ಅವರು ಕಳೆದ ಅವಧಿಯಲ್ಲಿ ಮಂಜೇಶ್ವರದ ಶ್ರೀ ಅನಂತೇಶ್ವರ ದೇವಸ್ಥಾನದ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸಿದ್ದರು.
ಅವರು ತಾಯಿ, ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆಯಲಿದೆ.