ಗರುಡ ಗ್ಯಾಂಗ್‌ನ ಸದಸ್ಯ ಮಹಮ್ಮದ್ ಅಲ್ಫಾಜ್ ಗೂಂಡಾ ಕಾಯ್ದೆಯಡಿ ಬಂಧನ
Friday, April 24, 2026
ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣೆಯ ರೌಡಿ ಆಸಾಮಿ, ಕಿರಿಮಂಜೇಶ್ವರ ಅರೆಹೊಳೆಯ ಮಹಮ್ಮದ್ ಅಲ್ಫಾಜ್ ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ .
ಉಡುಪಿ ಪೊಲೀಸ್ ಅಧೀಕ್ಷಕರ ವರದಿಯ ಮೇರೆಗೆ ಜಿಲ್ಲಾ ದಂಡಾಧಿಕಾರಿಯವರು ಹಾಗೂ ಜಿಲ್ಲಾಧಿಕಾರಿಯವರು ಹೊರಡಿಸಿರುವ ಆದೇಶದಂತೆ ಬಂಧಿಸಲಾಗಿದೆ.
ಗೂಂಡಾ ಆಸಾಮಿಯ ವಿರುದ್ದ ಉಡುಪಿ ಜಿಲ್ಲೆಯ ಶಿರ್ವಾ, ಗಂಗೊಳ್ಳಿ, ಬೈಂದೂರು, ಉಡುಪಿ ನಗರ, ಕುಂದಾಪುರ ಗ್ರಾಮಾಂತರ, ಕುಂದಾಪುರ ನಗರ ಠಾಣೆಯಲ್ಲಿ ಹಾಗೂ ನೆರೆಯ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರ ಠಾಣೆ ಸೇರಿದಂತೆ ಕೊಲೆಯತ್ನ-2, ದರೋಡೆ-1, ದರೋಡೆ ಯತ್ನ-1, ಹಲ್ಲೆ-1, ಅಕ್ರಮ ಕೂಟ-2, ಅಪಹರಣ-1, ಮಾದಕ ವಸ್ತು ಮಾರಾಟ-1, ಹಾಗೂ ಇತರ ಪ್ರಕರಣ-1 ಒಟ್ಟು 10 ಪ್ರಕರಣಗಳು ದಾಖಲಾಗಿರುತ್ತದೆ. ಅವುಗಳ ಪೈಕಿ 1 ಪ್ರಕರಣ ಖುಲಾಸೆ, 8 ಪ್ರಕರಣ ನ್ಯಾಯಾಲಯ ವಿಚಾರಣೆ, ಉಳಿದ ಒಂದು ಪ್ರಕರಣ ತನಿಖೆಯಲ್ಲಿರುತ್ತದೆ.
ಬಂಧಿತ ಆರೋಪಿಯನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶಿಸಲಾಗಿದೆ.