ಮೇ. 17: ಪರ್ಕಳ ಮಂಗಳ ಕಲಾ ಸಾಹಿತ್ಯ ವೇದಿಕೆ 23ನೇ ವರ್ಷದ ಸಂಭ್ರಮ 'ಕಲಾ ಕೌಸ್ತುಭ'
ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ ಇದರ ಇಪ್ಪತ್ತಮೂರನೇ ವರ್ಷದ ಸಂಭ್ರಮ ‘ಕಲಾ ಕೌಸ್ತುಭ’ ಕಾರ್ಯಕ್ರಮವು ಮೇ. 17 ರಂದು ಪರ್ಕಳದ ಶ್ರೀ ವಿಘ್ನೇಶ್ವರ ಸಬಾಭವನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನಟರಾಜ್ ಪರ್ಕಳ ತಿಳಿಸಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗೋಷ್ಥಿಯಲ್ಲಿ ಮಾತನಾಡಿದರು. ಮೇ.17ರಂದು ಮಧ್ಯಾಹ್ನ ಘಂಟೆ 3.30ಕ್ಕೆ ಉಡುಪಿ ನಗರ ಸಭೆಯ ಮಾಜಿ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಗಂಟೆ 3.45ಕ್ಕೆ ಖ್ಯಾತ ಭಾಗವತರಾದ ಗಣೇಶ ಆಚಾರ್ಯ ಬಿಲ್ಲಾಡಿ ಇವರಿಂದ ಯಕ್ಷ- ಗಾನ ವೈಭವ ಯಕ್ಷಗಾನ ಹಾಡುಗಾರಿಕೆ ನಡೆಯಲಿದೆ. ಸಂಜೆ 4.45ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷ ನಟರಾಜ ಪರ್ಕಳ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಮಂಗಳೂರು ಆಕಾಶವಾಣಿಯ ನಿವೃತ್ತ ಸಹಾಯಕ ನಿದೇಶಕರಾದ, ಹಿರಿಯ ಲೇಖಕಿ, ಹಿಂದಿ ಭಾಷಾ ತಜ್ಞರಾದ ಡಾ| ಮಾಲತಿ ಆರ್. ಭಟ್, ಕಾರ್ಯನಿರತ ಪತ್ರಕರ್ತರ ಸಂಘ ಉಡುಪಿ ಇದರ ಅಧ್ಯಕ್ಷರಾದ ಶ್ರೀ ಸುಬ್ರಮಣ್ಯ ಜಿ. ಭಟ್ ಕುರ್ಯ, ಅಂತರಾಷ್ಟಿçÃಯ ಮಯೂರ ವಿದ್ಯಾರತ್ನ, ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವಂದನಾ ರೈ ಕಾರ್ಕಳ, ಡಿಜಿಟಲ್ ಕ್ರಿಯೇಟರ್, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಿದ್ಧಿ ಪಡೆದ ಶಿಕ್ಷಕಿ ಸಂಧ್ಯಾ ಕಾಮತ್, ಮಾಜಿ ನಗರಸಭಾ ಸದಸ್ಯ ಮಹೇಶ್ ಠಾಕೂರ್ ಪರ್ಕಳ ಇವರು ಭಾಗವಹಿಸಲಿರುವರು. ಜೊತೆಗೆ ವೇದಿಕೆಯ ಗೌರವ ಅಧ್ಯಕ್ಷರಾದ ಪ್ರಕಾಶ್ ಶೆಣೈ ಪರ್ಕಳ, ಶ್ರೀನಿವಾಸ ಉಪಾಧ್ಯ ಪರ್ಕಳ, ಸಂಚಾಲಕರಾದ ಮಂಜುನಾಥ ಉಪಾಧ್ಯ, ಪೋಷಕರಾದ ಶ್ರೀಧರ್ ಭಟ್ ನೆಲ್ಲಿಕಟ್ಟೆ, ಸರ್ವೋದಯ ಶೆಟ್ಟಿಗಾರ್, ಭುವನ ಪ್ರಸಾದ್ ಹೆಗ್ಡೆ ಮಣಿಪಾಲ ಇವರು ವೇದಿಕೆಯಲ್ಲಿ ಉಪಸ್ಥಿತಲಿರುವರು ಎಂದರು.
ಕಾರ್ಯಕ್ರಮದಲ್ಲಿ ಗಣಪತಿ ವಿಗ್ರಹ ತಯಾರಕರಾದ ದೇವರಾಜ್ ನಾಯಕ್ ಸಣ್ಣಕ್ಕಿಬೆಟ್ಟು ಹಾಗೂ ಸೃಜನಶೀಲ ಛಾಯಾಗ್ರಾಹಕರಾದ ಅಂತಾರಾಷ್ಟಿçÃಯ ಪ್ರಶಸ್ತಿ ವಿಜೇತರಾದ ಶ್ರೀ ನಿಧೀಶ್ ಕುಮಾರ್ ಪರ್ಕಳ ಇವರನ್ನು ಸನ್ಮಾನಿಸಲಾಗುವುದು.
ಸಂಜೆ 6.15ಕ್ಕೆ ಶ್ರೀ ಮಹಾಲಿಂಗೇಶ್ವರ ನಾಟ್ಯ ತಂಡ ಮರ್ಣೆ ಇದರ ಕಲಾವಿದರಿಂದ ದೀಕ್ಷಾ ಗುಂಡುಪಾದೆ ಇವರ ನಿರ್ದೇಶನದಲ್ಲಿ ‘ಧರೆಗಿಳಿದ ಜಗನ್ಮಾತೆ’ ಎಂಬ ವಿಭಿನ್ನ ಭಕ್ತಿಪ್ರದಾನ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. ಹಾಗೂ ರಾತ್ರಿ 7.15ಕ್ಕೆ ಡೆನ್ನಾನ ಕಲಾವಿದರು ಕಾರ್ಕಳ ಇದರ ಕಲಾವಿದರಿಂದ ತುಳು ಜಾನಪದ ಶೈಲಿಯ ಹಾಸ್ಯಮಯ ನಾಟಕ ‘ಡೆನ್ನಾನ’ ಪ್ರದರ್ಶನಗೊಳ್ಳಲಿದೆ. ಜೊತೆಗೆ ಈ ಬಾರಿ ವಿಶೇಷವಾಗಿ ಅದೇ ದಿನ ಬೆಳಿಗ್ಗೆ 10.00 ಗಂಟೆಗೆ ಸ್ಥಳೀಯ ಸಂಘ- ಸಂಸ್ಥೆಗಳ ಸಮನ್ವಯ ಸಭೆ ಏರ್ಪಡಿಸಲಾಗಿದೆ. ಇದರ ಉದ್ಘಾಟನೆಯನ್ನು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಇವರು ನೆರವೇರಿಸಲಿರುವರು. ಸಭೆಯ ಅಧ್ಯಕ್ಷತೆಯನ್ನು ಅಂಬಾಭವಾನಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಕಬ್ಯಾಡಿ ಇವರು ವಹಿಸಲಿರುವರು. ದೇವಾಲಯಗಳ ಸಂವರ್ದನಾ ಸಮಿತಿಯ ಸಂಯೋಜಕರಾದ ಮನೋಹರ ಮಠದ್ ಪ್ರಚಾರಕ್ ಇವರು ದಿಕ್ಸೂಚಿ ಭಾಷಣ ಮಾಡಲಿರುವರು. ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್‌ನ ಜಿಲ್ಲಾ ಗವರ್ನರ್ ಸಪ್ನ ಸುರೇಶ್, ಮಾಜಿ ನಗರಸಭಾ ಸದಸ್ಯ ಮಹೇಶ್ ಠಾಕೂರ್, ಸ್ಥಾನಿಕ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಗಣೇಶ್ ಹೆಬ್ಬಾರ್ ಭಾಗವಹಿಸಲಿರುವರು. ವೇದಿಕೆಯ ಅಧ್ಯಕ್ಷರಾದ ನಟರಾಜ್ ಪರ್ಕಳ ಪ್ರಾಸ್ತಾವಿಕವಾಗಿ ಮಾತನಾಡಲಿರುವರು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಸಹ ಸಂಚಾಲಕ ಗೋಪಿ ಹಿರೇಬೆಟ್ಟು, ಉಪಾಧ್ಯಕ್ಷ ರಾಜೇಶ್ ನಾಯಕ್ ಸಣ್ಣಕ್ಕಿಬೆಟ್ಟು, ಗಣೇಶ್ ಸಣ್ಣಕ್ಕಿಬೆಟ್ಟು, ಕೋಶಾದಹಿಕಾರಿ ಸಂದೀಪ್ ನಾಯ್ಕ್ ಕಬ್ಯಾಡಿ ಮೊದಲಾದವರು ಉಪಸ್ಥಿತರಿದ್ದರು.