-->
 ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥರ ಜನ್ಮ ನಕ್ಷತ್ರ: ಮಹಿಳಾ ಭಜನಾ ಮಂಡಳಿಗಳಿಂದ ಭಜನೆ

ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥರ ಜನ್ಮ ನಕ್ಷತ್ರ: ಮಹಿಳಾ ಭಜನಾ ಮಂಡಳಿಗಳಿಂದ ಭಜನೆ


ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ 70ನೇ ಜನ್ಮ ನಕ್ಷತ್ರದ ಶುಭ ಸಂದರ್ಬದಲ್ಲಿ ಪಲಿಮಾರು ಮಠದ ಎದುರು ಮಹಿಳಾ ಭಜನಾ ಮಂಡಳಿಗಳ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ಆರಂಭಗೊಂಡಿದೆ.

 


ಶ್ರೀ ಕೃಷ್ಣ ಮಠದಲ್ಲಿ 2018 ರಿಂದ  ಕನಕ ಗೋಪುರದ ಬಳಿ ಭಜನಾ ಕಾರ್ಯಕ್ರಮ ಆರಂಭಗೊಂಡಿದ್ದು  ಇತ್ತೀಚಿಗೆ ಕನಕ ಗೋಪುರದ ಬಳಿಯಿಂದ ದೇವರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಭಜನಾ ಕಾರ್ಯಕ್ರಮದ ವೇದಿಕೆಯನ್ನು ತೆರವುಗೊಳಿಸಲಾಗಿತ್ತು. ಇದೀಗ ರಥಬೀದಿಯಲ್ಲಿ ನಿತ್ಯ ಭಜನೆ ನಡೆಯಬೇಕು ಎನ್ನುವ ಪಲಿಮಾರು ಶ್ರೀಗಳ ಸಂಕಲ್ಪದಂತೆ ನಿತ್ಯ ಭಜನಾ ಕಾರ್ಯಕ್ರಮ ನಡೆಸಲು ಯೋಜಿಸಲಾಗಿದೆ.  ಬೆಳ್ಳಿಗೆ 8ರಿಂದ ರಾತ್ರಿ  8ರವರೆಗೆ ನಿತ್ಯ ಭಜನೆ ರಥಬೀದಿಯಲ್ಲಿ ಆಗಬೇಕು. ಭಜನೆಯ ಝೇಂಕಾರ ಮೊಳಗಬೇಕು ಎಂಬ ಉದ್ದೇಶದಿದ ಪಲಿಮಾರು ಮಠದ ಎದುರುಗಡೆ ವ್ಯವಸ್ಥೆಯನ್ನು ಮಾಡಲಾಗಿದೆ.  ಮೊದಲ ದಿನದ ಭಜನಾ ಕಾರ್ಯಕ್ರಮವನ್ನು ವಾಸುದೇವ ಉಪಾದ್ಯ ಕಲ್ಮಜೆ ಉದ್ಘಾಟನೆ ಮಾಡಿದ್ದು ವಾದಿರಾಜ ಭಜನಾ ತಂಡದಿಂದ ಮೊದಲ ಭಜನಾ ಕಾರ್ಯಕಮ ನಡೆಯಿತು. ರಥಭೀದಿಯಲ್ಲಿ ಮತ್ತೆ ಭಜನಾ ಕಾರ್ಯಕ್ರಮ ಆರಂಭಿಸಿದ್ದಕ್ಕೆ ಕೃಷ್ಣಭಕ್ತರು ಸಂತಸ ವ್ಯಕ್ತಪಡಿಸಿದ್ದು ಪಲಿಮಾರು ಶ್ರೀಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.



Ads on article

Advertise in articles 1

advertising articles 2

Advertise under the article