ಉಡುಪಿ ಶ್ರೀಕೃಷ್ಣಮಠಕ್ಕೆ ಶಾಸಕರ ನಿಯೋಗದ ಅಧ್ಯಕ್ಷ ಪಿ ರಘುಮೂರ್ತಿ ತಂಡ ಭೇಟಿ
Wednesday, May 27, 2026
ಸಾರ್ವಜನಿಕ ಉದ್ದಿಮೆಗಳ ಸಮಿತಿ (ಕೆ ಯು ಐ ಡಿ ಎಫ್ ಸಿ) ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿಗಳ ಪರಿಶೀಲನೆಗೆ ಆಗಮಿಸಿದ ಶಾಸಕರ ನಿಯೋಗದ ಅಧ್ಯಕ್ಷ ಪಿ ರಘುಮೂರ್ತಿ ಹಾಗೂ ಅವರ ತಂಡ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಬಳಿಕ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ಅನುಗ್ರಹವನ್ನು ಪಡೆದರು. ಈ ವೇಳೆ ಶಾಸಕರಾದ ಜಿಕೆ ವೆಂಕಟೇಶ್ ರೆಡ್ಡಿ, ಕೃಷ್ಣಪ್ಪ, ಶಂಕರಗೌಡ, ಎಸ್. ಮುನಿರಾಜು, ಟಿ.ಎನ್ ಜವರಾಯ, ಕಿಶೋರ್ ಕುಮಾರ್ ಪುತ್ತೂರು ಹಾಗೂ ಸಮಿತಿಯ ಕಾರ್ಯದರ್ಶಿ ಶ್ರೀವಾಸ್ತವ (ಉಪಕಾರ್ಯದರ್ಶಿಗಳು ಹಣಕಾಸು ಇಲಾಖೆ ಬೆಂಗಳೂರು) ಉಡುಪಿ ನಗರಸಭಾ ಆಯುಕ್ತರಾದ ಮಹಾಂತೇಶ್ ಮತ್ತು ಕೆಯುಐಡಿಎಫ್ಸಿ ಕಾರ್ಯಪಾಲಕ ಅಭಿಯಂತರರು ದೇವರಾಜ್ ಅವರು ಇದ್ದರು.