ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ಚುನಾವಣಾ ಫಲಿತಾಂಶ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿ: ಕುತ್ಯಾರು ನವೀನ್ ಶೆಟ್ಟಿ
ಪಶ್ಚಿಮ ಬಂಗಾಲ, ಅಸ್ಸಾಂ, ಪುದುಚೇರಿ ಚುನಾವಣೆಗಳಲ್ಲಿ ಗೆದ್ದ ಪರಿಣಾಮ ಬಿಜೆಪಿ ಬಲ ಮತ್ತಷ್ಟು ಹೆಚ್ಚಾಗಿದೆ. ಈ ಕ್ರಾಂತಿಕಾರಿ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮೀತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತೀನ್ ನಬೀನ್ ಹಾಗೂ ಎಲ್ಲ ಬಿಜೆಪಿ ಕಾರ್ಯಕರ್ತರ ಶ್ರಮ ಕಾರಣ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದರು .
ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಮಾಡಿದ ಸಾಧನೆ ಶ್ಲಾಘಿಸಿ ಬಿಜೆಪಿ ಉಡುಪಿ ಜಿಲ್ಲಾ ಕಛೇರಿ ಎದುರು ನಡೆದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.
ಇದು ಧರ್ಮದ ಗೆಲುವು. ನಾವು ರಾಷ್ಟ್ರದ ಹಿತ ಕಾಪಾಡುವ ಸಿದ್ದಾಂತದಡಿ ಕೆಲಸ ಮಾಡುತ್ತಿದ್ದೇವೆ. ಹಾಗಾಗಿ ಈ ಗೆಲುವು ನಮ್ಮ ಬಲ ಹೆಚ್ಚಿಸಿದೆ.
ಇದೇ ಕರ್ನಾಟಕದ ಚುನಾವಣೆಗೆ ದಿಕ್ಸೂಚಿಯಾಗಬೇಕು. ಹಾಗಾಗಿ ನಾವೆಲ್ಲ ಸಮಯ, ಸಮಭಾವದಿಂದ ಕೆಲಸ ಮಾಡೋಣ. ಕರ್ನಾಟಕದಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸೋಣ ಎಂದರು.
ಬಿಜೆಪಿ ಪ್ರಶಿಕ್ಷಣ ವರ್ಗದ ಮಂಗಳೂರು ವಿಭಾಗ ಪ್ರಮುಖ್ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಬಿಜೆಪಿ ನಮ್ಮ ಕುಟುಂಬ. ಶ್ರಮ ವಹಿಸಿದರೆ ಎಲ್ಲಾ ಕಡೆ ಗೆಲ್ಲಬಹುದು ಎಂಬುದಕ್ಕೆ ಬಿಜೆಪಿ ಸಾಕ್ಷಿ. ಇಂದು ಅಧರ್ಮ ಅಳಿದು ಧರ್ಮಕ್ಕೆ ಜಯ ಸಿಕ್ಕಿದೆ. ಅರಾಜಕತೆ ದೂರವಾಗಿದೆ ಎಂದರು.
ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ, ಬಾಂಗ್ಲಾ ನುಸುಳುಕೋರರಿಗೆ ಬಿಜೆಪಿ ಗೆಲವಿನಿಂದ ತಕ್ಕ ಶಾಸ್ತಿಯಾದಂತಾಗಿದೆ. ಬಿಜೆಪಿ ಸಾಧನೆಯ ಮೂಲಕವೇ ಜನರ ವಿಶ್ವಾಸ ಗಳಿಸಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ಶ್ರೀಕಾಂತ್ ನಾಯಕ್, ಮಾಜಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮುಖಂಡರುಗಳಾದ ಕಿರಣ್ ಕುಮಾರ್ ಬೈಲೂರು, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಶ್ಯಾಮಲಾ ಎಸ್. ಕುಂದರ್, ನಯನಾ ಗಣೇಶ್, ನಳಿನೀ ಪ್ರದೀಪ್ ರಾವ್, ಸರಿತಾ ಶಿವಾನಂದ, ರಾಜೇಶ್ ಕಾವೇರಿ, ಶ್ರೀನಿಧಿ ಹೆಗ್ಡೆ, ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಅನಿತಾ ಶ್ರೀಧರ್, ಶೋಭಾ ಭಾಸ್ಕರ್, ಸತ್ಯಾನಂದ ನಾಯಕ್, ದಿವಾಕರ ಶೆಟ್ಟಿ ಕಲ್ಯಾ, ಮಧುಕರ ಮುದ್ರಾಡಿ, ಶಶಾಂಕ್ ಶಿವತ್ತಾಯ, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಸಂಧ್ಯಾ ರಮೇಶ್, ದಿಲ್ಲೇಶ್ ಶೆಟ್ಟಿ, ವಿಜಯ ಕೊಡವೂರು, ಪ್ರಭಾಕರ್ ಪೂಜಾರಿ, ಕಮಲಾಕ್ಷ ಹೆಬ್ಬಾರ್, ರುಡಾಲ್ಫ್ ಡಿಸೋಜಾ, ಕೃಷ್ಣಮೂರ್ತಿ ಡಿ.ಬಿ., ಎಸ್.ನಾರಾಯಣ್, ಆಸೀಫ್ ಕಟಪಾಡಿ, ದಿನೇಶ್ ಅಮೀನ್, ಜಗದೀಶ್ ಆಚಾರ್ಯ ಕಪ್ಪೆಟ್ಟು, ಜಿತೇಂದ್ರ ಶೆಟ್ಟಿ, ಶರಣ್ ಮಟ್ಟು, ಸತೀಶ್ ಪೂಜಾರಿ ಬೋಳ, ಸುರೇಶ್ ಶೆಟ್ಟಿ ಶಿವಪುರ, ರಾಜೀವ ಕುಲಾಲ್, ಮನೋಜ್ ಶೆಟ್ಟಿ, ದೇವಾನಂದ ನಾಯ್ಕ್, ವೀಣಾ ಎಸ್. ಶೆಟ್ಟಿ, ರಾಘವೇಂದ್ರ ಉಪ್ಪೂರು, ಹರಿಮಕ್ಕಿ ರತ್ನಾಕರ ಶೆಟ್ಟಿ, ಕೈಲಾಡಿ ಬಾಲಕೃಷ್ಣ ಶೆಟ್ಟಿ, ಅರುಣ್ ಕುಮಾರ್ ಬಾಣಾ, ಲಕ್ಷ್ಮೀಶ ಬಂಗೇರ, ಕೃಷ್ಣಪ್ಪ ಜತ್ತನ್, ಸಲೀಂ ಅಂಬಾಗಿಲು, ಶ್ರೀವತ್ಸ, ನಿತಿನ್ ಪೈ, ಆನಂದ ಖಾರ್ವಿ, ದೇವೇಂದ್ರ ಪ್ರಭು, ಕಿಶೋರ್ ಕುಮಾರ್ ಕರಂಬಳ್ಳಿ, ಗುರುಪ್ರಸಾದ್, ಆನಂದ ಸುವರ್ಣ, ಅನಿತಾ ಡಿಸೋಜಾ, ದೀಪಾ ಪೈ, ಪ್ರಜ್ಞಾ ಶೆಟ್ಟಿ, ವಿದ್ಯಾ, ಚಂದ್ರಶೇಖರ ಪ್ರಭು, ಶಿವರಾಮ್ ಕಾಡಿಮಾರ್ ಸಹಿತ ಹಲವರು ಉಪಸ್ಥಿತರಿದ್ದರು.