-->
ಮಲ್ಪೆ ಧಕ್ಕೆಯಲ್ಲಿನ ಪ್ರವಾಸಿ ದೋಣಿಗಳ ಸ್ಥಳಾಂತರಿಸುವಂತೆ ಕನ್ನಿ ಮೀನುಗಾರರ ಸಂಘದಿಂದ ಮನವಿ

ಮಲ್ಪೆ ಧಕ್ಕೆಯಲ್ಲಿನ ಪ್ರವಾಸಿ ದೋಣಿಗಳ ಸ್ಥಳಾಂತರಿಸುವಂತೆ ಕನ್ನಿ ಮೀನುಗಾರರ ಸಂಘದಿಂದ ಮನವಿ


ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಿರ್ಮಿಸಿರುವ ಜಟ್ಟಿಯನ್ನು ತೆರವುಗೊಳಿಸಿ ಪ್ರವಾಸೀ ದೋಣಿಯನ್ನು ಸ್ಥಳಾಂತರಿಸುವಂತೆ ಕೋರಿ ಕನ್ನಿ ಮೀನುಗಾರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳು, ಸಂಸದರು ಹಾಗೂ ಮೀನುಗಾರಿಕಾ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. 


ಮೀನುಗಾರಿಕಾ ಬಂದರಿನಲ್ಲಿ ಇಂದು ಸಾವಿರಾರು ಬೋಟುಗಳು, ದೋಣಿಗಳು ಇನ್ನಿತರ ಮೀನುಗಾರಿಕೆ ಚಟುವಟಿಕೆಗಳು ಸುರಕ್ಷಿತವಾಗಿ ಮಲ್ಪೆ ಬಂದರಿನಲ್ಲಿ ನಡೆಯುತ್ತಿದೆ.

ಫೆಬ್ರವರಿ 6ರಂದು ಮಲ್ಪೆ ಮೀನುಗಾರಿಕಾ ಬಂದರಿನ ದಕ್ಕೆಯ ಬಳಿ ಇರುವ ಹೊಳೆಯಲ್ಲಿ ಜಟ್ಟಿಯನ್ನು ನಿರ್ಮಿಸಿ ಅಲ್ಲಿಂದ ದೋಣಿಯ ಮೂಲಕ ಪ್ರವಾಸಿಗರನ್ನು ಮಲ್ಪೆ ಬಂದರಿನ ಸುತ್ತಮುತ್ತ ತಿರುಗಾಡಿಸುವುದು ಮತ್ತು ಬಂದರಿನ ಅಳಿವೆ ಬಾಗಿಲಿನ ಮೂಲಕ ಸಮುದ್ರಯಾನವನ್ನು ಮಾಡುವುದನ್ನು ಪ್ರಾರಂಭಿಸಿರುತ್ತಾರೆ. ಮಲ್ಪೆ ಬಂದರಿನ ಒಳಗೆ ಸುಮಾರು 1800ರಿಂದ 2000ಕ್ಕಿಂತಲೂ ಹೆಚ್ಚು ಮೀನುಗಾರಿಕಾ ಯಾಂತ್ರೀಕೃತ ಬೋಟುಗಳು ಮತ್ತು ಸಾಂಪ್ರದಾಯಿಕ ನಾಡದೋಣಿ, ಗಿಲ್‌ನೆಟ್ ದೋಣಿ, ಕಂತು ಬಲೆ ಇವುಗಳು ಎಲ್ಲವು ಪ್ರತಿದಿನ ಮೀನುಗಾರಿಕೆಗೆ ಹೋಗಿ ಬರುವಾಗ ಮತ್ತು ಆಕ್ಷನ್ ಮೀನು ಖಾಲಿ ಮಾಡಿ ಆದ ಮೇಲೆ ಡೀಪ್ ಸೀ, ತ್ರಿಸೆವೆಂಟಿ ಬೋಟಿನ ಚಲ್ಫ್ ಮತ್ತು ಕಟ್ಟಿಂಗ್ ಮೀನು ಖಾಲಿ ಮಾಡಲು ಮತ್ತು ಐಸ್, ಡೀಸಿಲ್, ನೀರು ಹಾಕಲು ಮತ್ತು ಬೋಟಿನ ದುರಸ್ತಿಯನ್ನು ಮಾಡಲು ಕಚ್ಚೇರಿ ಕಟ್ಟಲು ಹೋಗುವಾಗ ಈ ಪ್ರವಾಸಿಗರ ದೋಣಿಗಳಿಗೆ ಡಿಕ್ಕಿ ಹೊಡೆದು ಅಲ್ಲಿ ಪ್ರವಾಸಿಗರ ಪ್ರಾಣಹಾನಿಯಾಗುವ ಸಂಭವವಿದೆ. 

ಅಲ್ಲದೇ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಈಗಾಗಲೇ ಜಾಗದ ಸಮಸ್ಯೆಗಳು ಉಂಟಾಗಿದ್ದು, ಈಗ ಇರುವ ಬೋಟುಗಳನ್ನು ಪ್ರತಿದಿನ ನಿಭಾಯಿಸುವುದು ಕಷ್ಟದ ಕೆಲಸವಾಗಿರುತ್ತದೆ. ಅದಲ್ಲದೆ ಮತ್ತಷ್ಟು ಹೊಸ ಯಾಂತ್ರೀಕೃತ ಬೋಟುಗಳು ಮುಂದೆ ಬರಲಿದ್ದು ಮುಂದೆ ಇನ್ನಷ್ಟು ಸಮಸ್ಯೆಗಳು ಉದ್ಭವಿಸಬಹುದು. ಹಾಗಾಗಿ  ಹೊಳೆಯಲ್ಲಿ ನಿರ್ಮಿಸಿರುವ ಜಟ್ಟಿಯನ್ನು ತೆರವುಗೊಳಿಸಿ ಪ್ರವಾಸಿಗರ ಸಮುದ್ರಯಾನವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಮನವಿಯಲ್ಲಿ ಕೋರಲಾಗಿದೆ. 

Ads on article

Advertise in articles 1

advertising articles 2

Advertise under the article