-->
ಕಾಪು: ಸ್ವಾವಲಂಬಿ ಸಾರಥಿ ಯೋಜನೆಯಡಿ ಮಂಜೂರಾದ ವಾಹನಗಳ ಹಸ್ತಾಂತರ

ಕಾಪು: ಸ್ವಾವಲಂಬಿ ಸಾರಥಿ ಯೋಜನೆಯಡಿ ಮಂಜೂರಾದ ವಾಹನಗಳ ಹಸ್ತಾಂತರ


ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಉಡುಪಿ ಜಿಲ್ಲೆ ವತಿಯಿಂದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ ಸ್ವಾವಲಂಬಿ ಸಾರಥಿ ಯೋಜನೆಯಡಿ ಮಂಜೂರಾದ ಗೂಡ್ಸ್ ವಾಹನಗಳನ್ನು ಕಾಪು ತಾಲೂಕು ಪಂಚಾಯತ್ ಕಟ್ಟಡದ ಬಳಿ ಫಲಾನುಭವಿಗಳಿಗೆ ವಿತರಿಸಲಾಯಿತು.


ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಫಲಾನುಭವಿಗಳಿಗೆ ವಾಹನದ ಕೀಲಿ ಕೈ ಹಸ್ತಾಂತರಿಸಿದರು. ಸ್ವಾವಲಂಬಿ ಸಾರಥಿ ಯೋಜನೆಯಡಿ ಎರ್ಮಾಳು ಗ್ರಾಮದ ಸುಜೀಂದ್ರ, ಕಟಪಾಡಿ ಏಣಗುಡ್ಡೆ ಗ್ರಾಮದ ಸೂರಜ್  ಸೇರಿದಂತೆ ಒಟ್ಟು 2 ಫಲಾನುಭವಿಗಳಿಗೆ ಗೂಡ್ಸ್ ವಾಹನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್  ಅನಂತ ಶಂಕರ್, ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ವಿಜಯ್ ಕುಮಾರ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಶಂಕರ್, ಪಿಡಿಓ ತಿಲಕ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article