ಫ್ಯಾಶನ್ ಡಿಸೈನರ್, ಮೇಕಪ್ ಆರ್ಟಿಸ್ಟ್ ನೇಣು ಬಿಗಿದು ಆತ್ಮಹತ್ಯೆ
Wednesday, May 06, 2026
ಫ್ಯಾಶನ್ ಡಿಸೈನಿಂಗ್ ಹಾಗೂ ಮೇಕಪ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ಹೊರ ವಲಯದ ಉಳ್ಳಾಲದಲ್ಲಿ ನಡೆದಿದೆ.
ಶಿಲ್ಪಾ ವುಡ್ ಇಂಡಸ್ಟ್ರೀಸ್ ಮಾಲಕರಾದ ಸುರೇಶ್ ಅವರ ಪುತ್ರ ಯಜ್ಞೇಶ್ ಉಳ್ಳಾಲ (30) ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿದ್ದ ಯಜ್ಞೇಶ್ ಅವರು ಮನೆಯಲ್ಲಿ ತಮ್ಮ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫ್ಯಾಷನ್ ಹಾಗೂ ಸಿನಿಮಾ ಮೇಕಪ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.