ಅಲೆವೂರು ಗುಡ್ಡೆಯಂಗಡಿ ಸಮೀಪ ಚಿರತೆ ಪತ್ತೆ; 2 ಬೆಕ್ಕಿನ ಮರಿಗಳು ಬಲಿ! (ವೀಡಿಯೊ)
Thursday, June 25, 2026
ಉಡುಪಿ ಸಮೀಪದ ಅಲೆವೂರು ಗುಡ್ಡೆಯಂಗಡಿ ಬಳಿಯ ಮನೆಯೊಂದರ ಅಂಗಳದಲ್ಲಿ ನಿನ್ನೆ ಮಧ್ಯರಾತ್ರಿ ಚಿರತೆಯೊಂದು ಪತ್ತೆಯಾಗಿದ್ದು, ಎರಡು ಮರಿ ಬೆಕ್ಕುಗಳನ್ನು ಹಿಡಿದುಕೊಂಡು ಹೋದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಗುಡ್ಡೆಯಂಗಡಿ ಸಮೀಪದ ರೈಸ್ ಮಿಲ್ ಪಕ್ಕದ ಸುರೇಂದ್ರ ಪ್ರಭು ಅವರ ಮನೆಯಂಗಳದಲ್ಲಿ ಮಧ್ಯರಾತ್ರಿ 2 ಗಂಟೆ ಬಳಿಕ ಘಟನೆ ನಡೆದಿದೆ.
ಬೆಕ್ಕಿನ ಮರಿಗಳು ನಾಪತ್ತೆಯಾದ ಬಗ್ಗೆ ಸಿಸಿಟಿವಿ ವೀಡಿಯೊ ಪರಿಶೀಲಿಸಿದಾಗ ಈ ಘಟನೆ ಬಯಲಿಗೆ ಬಂದಿದೆ.