-->
ಗೃಹ ಬಳಕೆ ಅಡುಗೆ ಅನಿಲ ದರ ಮತ್ತೆ ರೂ. 29 ಏರಿಕೆ!

ಗೃಹ ಬಳಕೆ ಅಡುಗೆ ಅನಿಲ ದರ ಮತ್ತೆ ರೂ. 29 ಏರಿಕೆ!


ದೇಶದಾದ್ಯಂತ ಮತ್ತೊಮ್ಮೆ 
ಗೃಹಬಳಕೆಯ  ಅಡುಗೆ ಅನಿಲದ (ದ್ರವೀಕೃತ ಪೆಟ್ರೋಲಿಯಂ ಅನಿಲ) ಸಿಲಿಂಡರ್ ದರವನ್ನು ಸರಕಾರ ರೂ. 29ರಷ್ಟು ಹೆಚ್ಚಿಸಿದೆ. ಜೂನ್ 7ರಿಂದಲೇ ಈ ಹೊಸ ದರ 
ಜಾರಿಗೆ ಬಂದಿದ್ದು, ದೆಹಲಿಯಲ್ಲಿ 14.2 ಕೆಜಿ ಗೃಹಬಳಕೆಯ LPG ಸಿಲಿಂಡರ್ ಬೆಲೆ ₹913ರಿಂದ ₹942ಕ್ಕೆ ಏರಿಕೆಯಾಗಿದೆ.  

ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿರುವ ಮಾಹಿತಿಯ ಪ್ರಕಾರ, ಪರಿಷ್ಕೃತ ದರಗಳು ತಕ್ಷಣದಿಂದ ಜಾರಿಯಾಗಿವೆ. ಸರಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು ಇಂಧನ ದರಗಳನ್ನು ಸಮಾನವಾಗಿ ನಿಗದಿಪಡಿಸುವುದರಿಂದ ದೇಶದಾದ್ಯಂತ ಗ್ರಾಹಕರ ಮೇಲೆ ಈ ಹೆಚ್ಚಳದ ಪರಿಣಾಮ ಬೀಳಲಿದೆ. ಇದು ಕಳೆದ ಮೂರು ತಿಂಗಳಲ್ಲಿ ಗೃಹಬಳಕೆಯ ಎಲ್.ಪಿ.ಜಿ. ದರದಲ್ಲಿ ನಡೆದ 2ನೇ ಏರಿಕೆಯಾಗಿದೆ. ಮಾರ್ಚ್ ತಿಂಗಳಲ್ಲಿ ಸಿಲಿಂಡರ್ ದರವನ್ನು ₹60 ಹೆಚ್ಚಿಸಲಾಗಿತ್ತು. ಅದರ ನಂತರ ಇದೀಗ ಮತ್ತೆ ₹29 ಹೆಚ್ಚಳವಾಗಿರುವುದು ಮಧ್ಯಮ ವರ್ಗದ ಕುಟುಂಬಗಳ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. 

Ads on article

Advertise in articles 1

advertising articles 2

Advertise under the article