-->
 ರೆಮೋನಾ ಎವೆಟ್ ಪೆರೇರಾ ಬಿ-ಗ್ರೇಡ್ ಶಾಸ್ತ್ರೀಯ ನೃತ್ಯ ಕಲಾವಿದೆಯಾಗಿ ಆಯ್ಕೆ

ರೆಮೋನಾ ಎವೆಟ್ ಪೆರೇರಾ ಬಿ-ಗ್ರೇಡ್ ಶಾಸ್ತ್ರೀಯ ನೃತ್ಯ ಕಲಾವಿದೆಯಾಗಿ ಆಯ್ಕೆ


ಮಂಗಳೂರಿನ ಸಂತ ಅಲೋಸಿಯೆಸ್ ಪರಿಗಣಿತ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ರೆಮೋನಾ ಎವೆಟ್ ಪೆರೇರಾ ಅವರು ದೂರದರ್ಶನ ಚಂದನ ವಾಹಿನಿ ವತಿಯಿಂದ ಇತ್ತೀಚೆಗೆ ಆಯೋಜಿಸಲಾದ ಆಡಿಷನ್‌ನಲ್ಲಿ ಯಶಸ್ವಿಯಾಗಿ ಭಾಗವಹಿಸಿ, ಬಿ-ಗ್ರೇಡ್ ಶಾಸ್ತ್ರೀಯ ನೃತ್ಯ ಕಲಾವಿದೆಯಾಗಿ ಆಯ್ಕೆಯಾಗಿದ್ದಾರೆ.

ರೆಮೋನಾ ಅವರು ಸೌರಭ ಸಂಗೀತ ನೃತ್ಯ ಕಲಾ ಪರಿಷತ್ ನ ಗುರುಗಳಾದ ಡಾ. ಶ್ರೀವಿದ್ಯಾ ಅವರ ಶಿಷ್ಯೆಯಾಗಿದ್ದು, ಕಳೆದ 18 ವರ್ಷಗಳಿಂದ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ. ಗುರುಗಳ ಮಾರ್ಗದರ್ಶನ ಮತ್ತು ತರಬೇತಿಯಡಿ ತಮ್ಮ ಕಲಾ ಪ್ರತಿಭೆಯನ್ನು ನಿರಂತರವಾಗಿ ಬೆಳೆಸಿಕೊಂಡಿರುವ ಅವರು ವಿವಿಧ ವೇದಿಕೆಗಳಲ್ಲಿ ತಮ್ಮ ನೃತ್ಯ ಕೌಶಲ್ಯವನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ.

ದೂರದರ್ಶನ ಚಂದನವಾಹಿನಿಯ ಆಡಿಷನ್‌ನಲ್ಲಿ ಅವರ ಸಾಧನೆ ಕಲಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಮಂಗಳೂರು ಹಾಗೂ ವಿಶ್ವವಿದ್ಯಾಲಯಕ್ಕೆ ಹೆಮ್ಮೆಯನ್ನು ತಂದಿದೆ. ರೆಮೋನಾ ಅವರ ಈ ಸಾಧನೆಗೆ ಗುರುಗಳು, ಕುಟುಂಬಸ್ಥರು, ಸಹಪಾಠಿಗಳು ಹಾಗೂ ಕಲಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article