-->
ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ತಮಿಳುನಾಡು ಸಿಎಂ ಜೋಸೆಫ್ ವಿಜಯ್

ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ತಮಿಳುನಾಡು ಸಿಎಂ ಜೋಸೆಫ್ ವಿಜಯ್


ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಕೊಲ್ಲೂರಿಗೆ ಆಗಮಿಸಿ, ಮೂಕಾಂಬಿಕೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. 

ಮಳೆಯ ನಡುವೆಯೂ ಕೊಲ್ಲೂರಿನ ಪ್ರಸಿದ್ಧ ಮೂಕಾಂಬಿಕಾ ದೇವಾಲಯಕ್ಕೆ ಆಗಮಿಸಿದ ವಿಜಯ್ ಅವರಿಗೆ ದೇವಾಲಯದ ವತಿಯಿಂದ ಪೂರ್ಣಕುಂಭ ಕಲಶದೊಂದಿಗೆ ಭವ್ಯ ಸ್ವಾಗತ ಕೋರಲಾಯಿತು.


ದೇವಾಲಯದ ಮುಂಭಾಗದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಬು ಹೆಗ್ಡೆ ಹಾಗೂ ಸಮಿತಿ ಸದಸ್ಯರು ವಿಜಯ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ದೇವಾಲಯ ಪ್ರವೇಶಕ್ಕೂ ಮುನ್ನ ವಿಜಯ್ ಅವರು ದೇವಾಲಯದ ಧ್ವಜಸ್ತಂಭಕ್ಕೆ ನಮಸ್ಕರಿಸಿ ಭಕ್ತಿಭಾವದಿಂದ ದೇವಾಲಯದೊಳಗೆ ಪ್ರವೇಶಿಸಿದರು.ಬಳಿಕ ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರು ದೇವಾಲಯದ ಸಂಪ್ರದಾಯದಂತೆ ಸ್ವಾಗತಿಸಿ ವಿಶೇಷ ಪೂಜೆಯ ಸಂಕಲ್ಪ ನೆರವೇರಿಸಿದರು. ಸುಮಾರು ಇಪ್ಪತ್ತು ನಿಮಿಷಗಳ ಕಾಲ ದೇವಾಲಯದಲ್ಲಿದ್ದ ವಿಜಯ್ ಅವರು, ದೇವಿಗೆ ಪೂಜೆ ಸಲ್ಲಿಸಿ, ವಿಜಯದ ಸಂಕೇತವಾಗಿ ಬೆಳ್ಳಿಯ ಖಡ್ಗವನ್ನು ದೇವಿಗೆ ಅರ್ಪಿಸಿದ್ದಾರೆ.  ದೇವಿಯ ಎದುರು ಅರ್ಗಳಾ ಸ್ತೋತ್ರ ಪಠಿಸಿದ ಅರ್ಚಕರು, ವಿಜಯ್ ಕೈಗೆ ರಕ್ಷಾ ದಾರವನ್ನು ಕಟ್ಟಿದರು. ಅರ್ಚಕರ ಸಮ್ಮುಖದಲ್ಲಿ ಸಂಕಲ್ಪ ಮಾಡಿ ವಿಶೇಷ ಪೂಜೆ ಸಲ್ಲಿಸಿದ ಅವರು, ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದರು. 




 

Ads on article

Advertise in articles 1

advertising articles 2

Advertise under the article