-->
ಕೃಷ್ಣ ರಾವ್ ವಿರುದ್ಧ ವಂಚನೆ ಪ್ರಕರಣ: ಮಧ್ಯಸ್ಥಿಕೆದಾರರಾಗಿ ವಕೀಲೆ ಎಸ್ ಸುಶೀಲಾ ನೇಮಕ

ಕೃಷ್ಣ ರಾವ್ ವಿರುದ್ಧ ವಂಚನೆ ಪ್ರಕರಣ: ಮಧ್ಯಸ್ಥಿಕೆದಾರರಾಗಿ ವಕೀಲೆ ಎಸ್ ಸುಶೀಲಾ ನೇಮಕ


ಪುತ್ತೂರಿನ ಯುವತಿಗೆ ವಂಚನೆ ಎಸಗಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿ ಎಂಜಿನಿಯರಿಂಗ್ ವಿದ್ಯಾರ್ಥಿ ಕೃಷ್ಣ ಜೆ. ರಾವ್ ವಿರುದ್ಧ ದಾಖಲಾಗಿರುವ ಪ್ರಕರಣದ ರಾಜೀಸಂಧಾನ  ಕೇಂದ್ರದ ಮಧ್ಯಸ್ಥಿಕೆದಾರರಾಗಿ ಹಿರಿಯ ವಕೀಲೆ ಎಸ್ ಸುಶೀಲಾ ಅವರನ್ನು ನೇಮಕ ಮಾಡಲಾಗಿದೆ.  

ತನ್ನ ವಿರುದ್ಧ ದಾಖಲಾಗಿರುವ ಪ್ರಕರಣದ ರದ್ದತಿಗೆ ಕೋರಿ ಕೃಷ್ಣ ರಾವ್  ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠದ ಮುಂದೆ   ವಿಚಾರಣೆ ನಡೆಸಲಾಯಿತು. ಈ ವೇಳೆ, ಕೃಷ್ಣ ರಾವ್ ಪರವಾಗಿ ಹಾಜರಾದ ಪದಾಂಕಿತ ಹಿರಿಯ ವಕೀಲ ಪಿ.ಪಿ. ಹೆಗ್ಡೆ ಅವರು ಪ್ರಕರಣವನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಪ್ರಸ್ತಾವವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಈ ಮನವಿಯನ್ನು ಪರಿಗಣಿಸಿದ ನ್ಯಾಯಪೀಠ, ಪ್ರಕರಣದ ಸಂಧಾನ ಪ್ರಕ್ರಿಯೆಗಾಗಿ ಎಸ್. ಸುಶೀಲಾ ಅವರನ್ನು ಮಧ್ಯಸ್ಥಿಕೆದಾರರಾಗಿ ನೇಮಕ ಮಾಡಿ ಆದೇಶ ಹೊರಡಿಸಿತು.

ಅಲ್ಲದೆ, ಪ್ರಕರಣದ ಸಂತ್ರಸ್ತೆ, ಆರೋಪಿ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರೆ ಪಕ್ಷಗಳು ಜೂ 19ರಂದು ಮಧ್ಯಸ್ಥಿಕೆ ಕೇಂದ್ರದ ಮುಂದೆ ಹಾಜರಾಗುವಂತೆ ನ್ಯಾಯಪೀಠ ಸೂಚನೆ ನೀಡಿದೆ.

Ads on article

Advertise in articles 1

advertising articles 2

Advertise under the article