-->
 ಅಮೇರಿಕಾ ನ್ಯೂಜೆರ್ಸಿಯಲ್ಲಿ ಪುತ್ತಿಗೆ ಶ್ರೀಗಳಿಗೆ ಪೌರ ಸನ್ಮಾನ

ಅಮೇರಿಕಾ ನ್ಯೂಜೆರ್ಸಿಯಲ್ಲಿ ಪುತ್ತಿಗೆ ಶ್ರೀಗಳಿಗೆ ಪೌರ ಸನ್ಮಾನ


ಚತುರ್ಥ ಪರ್ಯಾಯ ಪೂರ್ಣಗೊಳಿಸಿದ ಬಳಿಕ ಅಮೇರಿಕಾದ ನ್ಯೂಜೆರ್ಸಿಗೆ ಆಗಮಿಸಿದ ಪುತ್ತಿಗೆ ಸುಗುಣೇಂದ್ರ ಶ್ರೀಗಳ ಪೌರ ಸನ್ಮಾನವು ಎಡಿಸನ್ ಶ್ರೀ ಕೃಷ್ಣ ವೃಂದಾವನದ ಸಭಾಂಗಣದಲ್ಲಿ ವಿಜೃಂಭಣೆಯಿಂದ ನೆರವೇರಿತು. 


ದಕ್ಕೂ ಮುನ್ನ ಶ್ರೀಗಳು ಲಂಡನ್ ಹಾಗೂ ಕೆನಡಾದ ಟೊರಂಟೋದಲ್ಲಿರುವ ತಮ್ಮ ಮಠಗಳಿಗೆ ಭೇಟಿಯಿತ್ತರು.


ಎಡಿಸನ್ ನಗರದ ಹೃದಯ ಭಾಗದಲ್ಲಿರುವ ರಸ್ತೆಗಳಲ್ಲಿ ಕುದುರೆ ಸಾರೋಟು, ಪೂರ್ಣ ಕುಂಭ, ಸ್ಯಾಕ್ಸೋಫೋನ್, ಕೊಳಲು, ಡೋಲಕ, ಕೋಲಾಟ ನೃತ್ಯ ಮತ್ತು ವೇದ ಘೋಷದೊಂದಿಗೆ ಶ್ರೀ ಕೃಷ್ಣ ವೃಂದಾವನದ ಆವರಣಕ್ಕೆ ಶ್ರೀಗಳನ್ನು ಕರೆ ತರಲಾಯಿತು.

ನ್ಯೂ ಜೆರ್ಸಿಯ ಮೊಂಟುಗೊಮೆರಿ ಪಟ್ಟಣದ ಮೇಯರ್ ನೀನಾ ಸಿಂಗ್ ಮತ್ತು ಪತಿ ಪರಂಜಿತ್ ಸಿಂಗ್ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಅಭಿಮಾನಿ ಶಿಷ್ಯರಾದ 

ಡಾ ಸುಧೀಂದ್ರ, ಪೂರ್ಣಿಮಾ, ಉದ್ಯಮಿ ಸುರೇಶ ವಸಿಷ್ಠ, ಮೀನಾ ವಸಿಷ್ಠ, ಚೇತನ್ ಭರ್ಗಿರಿ ಅವರು ಶ್ರೀಗಳಿಗೆ ಶಾಲು, ಹಾರ ಮತ್ತು ಪೇಟವನ್ನು ತೊಡಿಸಿ ಪುಷ್ಪವೃಷ್ಟಿಯ ನಡುವೆ ಶ್ರೀಗಳಿಗೆ ಸನ್ಮಾನವನ್ನು ನಡೆಸಿಕೊಟ್ಟರು. 

 ಪೌರ ಸನ್ಮಾನ ಸ್ವೀಕರಿಸಿದ ಶ್ರೀಗಳು, ಸುದೀರ್ಘ ಎರಡೂವರೆ ವರ್ಷದ ಬಳಿಕ ಅಮೆರಿಕಾದ ನ್ಯೂಜೆರ್ಸಿ ಕ್ಷೇತ್ರಕ್ಕೆ ಮರಳಿದ್ದು ತಮಗೆ ತವರು ಮನೆಗೆ ಬಂದಷ್ಟೇ ಸಂತೋಷವಾಗಿದೆ. ಕೋಟಿಗೀತಾಲೇಖನಯಜ್ಞದ ಸ್ಮಾರಕವಾಗಿ ನ್ಯೂಜೆರ್ಸಿ ಮಠದಲ್ಲಿ ಅಪೂರ್ವ ಯಜ್ಞಶಾಲೆ ನಿರ್ಮಾಣ ಮಾಡುವುದಾಗಿ ಹೇಳಿದರು. ಅಧಿಕ ಮಾಸ ಪ್ರಯುಕ್ತ ಅನೇಕ ಭಕ್ತರಿಗೆ ಶ್ರೀಗಳಿಂದ ತಪ್ತ ಮುದ್ರಾಧಾರಣೆ ನಡೆಯಿತು.


Ads on article

Advertise in articles 1

advertising articles 2

Advertise under the article