-->
 ಮೂಡಬಿದ್ರೆಯಲ್ಲಿ ಆಟೋ ರಿಕ್ಷಾ ಪಲ್ಟಿ: ನಿವೃತ್ತ ಶಿಕ್ಷಕ ಮೃತ್ಯು

ಮೂಡಬಿದ್ರೆಯಲ್ಲಿ ಆಟೋ ರಿಕ್ಷಾ ಪಲ್ಟಿ: ನಿವೃತ್ತ ಶಿಕ್ಷಕ ಮೃತ್ಯು


ಆಟೋ ರಿಕ್ಷಾ ಪಲ್ಟಿಯಾಗಿ ನಿವೃತ್ತ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಮೂಡಬಿದ್ರೆಯಲ್ಲಿ ನಡೆದಿದೆ.

ಮೃತರನ್ನು ನಿವೃತ್ತ ಶಿಕ್ಷಕ, ಆರ್.ಎಸ್.ಎಸ್ ಹಿರಿಯ ಕಾರ್ಯಕರ್ತ ಗೋಪಾಲಕೃಷ್ಣ ಭಟ್ ಎಂದು ಗುರುತಿಸಲಾಗಿದೆ. ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ರಿಕ್ಷಾ ಚಾಲಕ ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿದ ಆಟೋ ರಿಕ್ಷಾ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ರಿಕ್ಷಾದಿಂದ ಗೋಪಾಲಕೃಷ್ಣ ಭಟ್ ಅವರು ಹೊರಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 

ಘಟನೆ ಕುರಿತು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

Ads on article

Advertise in articles 1

advertising articles 2

Advertise under the article