ಕಾಪುವಿನ ಧಾರ್ಮಿಕ ಕೇಂದ್ರಗಳಿಗೆ ಅನಿವಾಸಿ ಭಾರತೀಯ ಉದ್ಯಮಿ ವಿನೋದ್ ಡಿಸೋಜ ಭೇಟಿ
Thursday, August 27, 2026
ಅನಿವಾಸಿ ಭಾರತೀಯ ಉದ್ಯಮಿ ವಿನೋದ್ ಡಿಸೋಜ ಅವರು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದರು.
ಉಡುಪಿಯ ಉದ್ಯಮಿ ಸಂತೋಷ್ ಶೆಟ್ಟಿ ತೆಂಕರಗುತ್ತು ಅವರ ಆತ್ಮೀಯ ಸ್ನೇಹಿತರಾಗಿರುವ ವಿನೋದ್ ಡಿಸೋಜ ಅವರು ಕಾಪು ತೆಂಕು ಕಲ್ಯಾ ಬಬ್ಬುಸ್ವಾಮಿ ದೈವಸ್ಥಾನ, ಕಾಪು ಹೊಸ ಮಾರಿಗುಡಿ ದೇವಸ್ಥಾನ ಹಾಗೂ ಪಾದುರು ಚಂದ್ರನಗರ ಶ್ರೀರಾಮ ಭಜನಾ ಮಂದಿರಕ್ಕೆ ಭೇಟಿ ನೀಡಿದರು. ಈ ವೇಳೆ ಸಂತೋಷ್ ಶೆಟ್ಟಿ ತೆಂಕರಗುತ್ತು ಅವರು ದೇವಸ್ಥಾನಗಳ ಇತಿಹಾಸದ ಬಗ್ಗೆ ವಿನೋದ್ ಡಿಸೋಜ ಅವರಿಗೆ ಮಾಹಿತಿ ನೀಡಿದರು.
ಈ ವೇಳೆ ತೆಂಕು ಕಲ್ಯಾ ಬಬ್ಬುಸ್ವಾಮಿ ದೈವಸ್ಥಾನ ಹಾಗೂ ಚಂದ್ರನಗರ ಶ್ರೀರಾಮ ಭಜನಾ ಮಂದಿರಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡಿದರು. ಈ ವೇಳೆ ಮಾತನಾಡಿದ ವಿನೋದ್ ಡಿಸೋಜ, ಜಾತಿ ಧರ್ಮಗಳು ನಮ್ಮ ಮನೆಗಷ್ಟೇ ಸೀಮಿತವಾಗಿರಲಿ. ಎಲ್ಲರೂ ಜಾತಿ ಧರ್ಮ ಮರೆತು ಸಾಮರಸ್ಯದಿಂದ ಬದುಕೋಣ ಎಂದರು.
ಈ ವೇಳೆ ಧಾರ್ಮಿಕ ಕೇಂದ್ರಗಳ ಪ್ರಮುಖರಾದ ಸಂತೋಷ್ ಶೆಟ್ಟಿ ತೆಂಕರಗುತ್ತು, ನಡಿಕೆರೆ ರತ್ನಾಕರ ಶೆಟ್ಟಿ, ರಮೇಶ್ ಹೆಗ್ಡೆ ಕಲ್ಯಾ, ಯೋಗೀಶ್ ಶೆಟ್ಟಿ ಬಾಲಾಜಿ, ಶ್ರೀಕರ ಶೆಟ್ಟಿ ಕಲ್ಯಾ, ಅರುಣ್ ಶೆಟ್ಟಿ ಪಾದೂರು, ಸತೀಶ್ ಭಂಡಾರಿ, ನಾರಾಯಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

