-->
 ಶ್ರೀರಸ್ತು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ

ಶ್ರೀರಸ್ತು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ


ಉಡುಪಿ ಶ್ರೀರಸ್ತು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.) ಇದರ ವಾರ್ಷಿಕ ಮಹಾಸಭೆಯು ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ಹಾಲ್‌ನಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಹಕಾರಿಯ ಅಧ್ಯಕ್ಷರಾದ ಆರ್.ವಿ. ಕುಂದರ್ ಮಾತನಾಡಿ, ಸಹಕಾರಿಯು ಸತತವಾಗಿ ಲಾಭದೊಂದಿಗೆ ಮುನ್ನಡೆಯಲು ಹಾಗೂ ಠೇವಣಿ ಹೆಚ್ಚಿಸಲು ಸಹಕರಿಸುತ್ತಿರುವ ಠೇವಣಿದಾರರು, ಪಿಗ್ಮಿ ಸಂಗ್ರಹಗಾರರು, ಸಿಬ್ಬಂದಿ ಹಾಗೂ ನಿರ್ದೇಶಕ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸರಿತ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು. ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.99.36 ಅಂಕ ಗಳಿಸಿದ ಕುಮಾರಿ ಸಮೀಕ್ಷಾ ಅವರನ್ನು ಹಾಗೂ ಅಭಿನಯ ಕಲಾ ಕ್ಷೇತ್ರದಲ್ಲಿ ಚಿಟ್ಟೆ ನಾಟಕದ ಕಥಾನಾಯಕಿಯಾಗಿ ಗಮನ ಸೆಳೆದ ಬಿಂದ್ಯಾ ಎಸ್.ಪಿ. ಅವರನ್ನು ಸನ್ಮಾನಿಸಲಾಯಿತು.

ಕಳೆದ ತಿಂಗಳು ನಡೆದ ಸಹಕಾರಿ ಧ್ವಜದ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ವಾರ್ಷಿಕ ಅವಧಿಯಲ್ಲಿ ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ಸಿಬ್ಬಂದಿ ಹಾಗೂ ನಿರ್ದೇಶಕರನ್ನು ಸಭೆಯಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ಎಸ್.ಎನ್. ಶೆಟ್ಟಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಪ್ರಶಾಂತ್ ಎಸ್., ನಿರ್ದೇಶಕರಾದ ಅಶೋಕ್ ಶೇರಿಗಾರ್, ಶ್ರೀಮತಿ ಜಲಜ ಕುಂದರ್, ರಾಮ ಶೇರಿಗಾರ್, ಮಾಧವ, ನಯನ ದಾಸ್, ಪ್ರಕಾಶ್ ಕುಂದರ್, ಶಿವಾನಂದ್, ಶ್ರೀಮತಿ ಅಮಿತ ಹಾಗೂ ಶ್ರೀಮತಿ ಚಿತ್ರಾಕ್ಷಿ ಉಪಸ್ಥಿತರಿದ್ದರು.

ದಿವ್ಯ ಸ್ವಾಗತಿಸಿ, ಪ್ರತೀಕ್ಷಾ ವಂದಿಸಿದರು. ಅಶ್ಮಿತ, ಚೈತ್ರ ಹಾಗೂ ಹರೀಶ್ ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article