-->
ಮಲ್ಲಿಕಾರ್ಜುನ ಖರ್ಗೆ ಮೇಲೆ ಜಾತಿ ದೌರ್ಜನ್ಯ: ಉಡುಪಿಯಲ್ಲಿ ದಲಿತ ಸಂಘಟನೆಗಳಿಂದ ಪ್ರತಿಭಟನೆ

ಮಲ್ಲಿಕಾರ್ಜುನ ಖರ್ಗೆ ಮೇಲೆ ಜಾತಿ ದೌರ್ಜನ್ಯ: ಉಡುಪಿಯಲ್ಲಿ ದಲಿತ ಸಂಘಟನೆಗಳಿಂದ ಪ್ರತಿಭಟನೆ


ಹಿಂದೂ ಧರ್ಮದ ಮಹಾ ಪೋಷಕ ಎಂಬುದಾಗಿ ಹೇಳಿಕೊಂಡಿರುವ ಆರ್.ಎಸ್.ಎಸ್ ಹಾಗೂ ಮನುವಾದಿಗಳು ಯವಜನತೆಯ ತಲೆಯಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ ಎಂದು ದಲಿತ ಮುಖಂಡ ಮಂಜುನಾಥ್ ಗಿಳಿಯಾರ್ ಆಕ್ರೋಶ ಹಾಕಿದ್ದಾರೆ. 


ಮಲ್ಲಿಕಾರ್ಜುನ ಖರ್ಗೆ ಮೇಲಿನ ಜಾತಿ ದೌರ್ಜನ್ಯ ವಿರೋಧಿಸಿ ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ), ಸಹಬಾಳ್ವೆ ವತಿಯಿಂದ ನಡೆದ ಪ್ರತಿಭಟನೆಯನ್ನುದ್ದೆಶಿಸಿ ಮಾತನಾಡಿದರು. 

ಉತ್ತರಕಾಂಡದಲ್ಲಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಅವಮಾನ ಮಾಡುವ ಮೂಲಕ ದಲಿತರನ್ನು ಗುಲಾಮರನ್ನಾಗಿ ಮಾಡಿಕೊಳ್ಳಬೇಕು ಎಂಬ ಅವರ ಮನಸ್ಥಿತಿಯನ್ನು ತೋರ್ಪಡಿಸುತ್ತಿದ್ದಾರೆ.ಜನರು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಸಾಂಪ್ರದಾಯಿಕ ಮನಸ್ಥಿತಿಯಿಂದ ಹೊರಬಂದು ದೇಶದಲ್ಲಿ ಶಾಂತಿ ನೆಲೆಸಲು ಮತ್ತು ಇನ್ನಷ್ಟು ವೇಗದಲ್ಲಿ ಅಭಿವೃದ್ಧಿ ಸಾಧಿಸುವಂತಾಗಬೇಕು. ಅಮಾನವೀಯ ಆಚರಣೆ ದೇಶದಲ್ಲಿ ಬಹಳಷ್ಟು ನಡೆಯುತ್ತಿದೆ. ಅವುಗಳ ವಿರುದ್ಧ ನಿರಂತರ ಹೋರಾಟ ನಡೆಸಬೇಕು. ಅಸ್ಪ್ರಶ್ಯತೆ, ಅಸಮಾನತೆಗಳನ್ನು ಸಂಪೂರ್ಣ ಹೋಗಲಾಡಿಸಬೇಕು ಎಂದರು. 

ಸಹಬಾಳ್ವೆ ಸಂಘಟನೆಯ ಪಣಿರಾಜ್ ಮಾತನಾಡಿ, ರಾಮಲೀಲಾ ಮೈದಾನದಲ್ಲಿ ನಡೆದ ಘಟನೆ ಸಂಪೂರ್ಣ ಸಂವಿಧಾನ ವಿರೋಧಿಯಾಗಿದೆ. ಸಂವಿಧಾನವನ್ನು ನಾಶ ಮಾಡಲು ಹೊರಟಿರುವ ಈ ಸರಕಾರದ ಒಂದೊಂದೆ ಅಜೆಂಡಾ ಹೊರಗಡೆ ಬರುತ್ತಿದೆ. ಘಟನೆ ಬಗ್ಗೆ ಕಾಂಗ್ರೆಸ್ ಪಕ್ಷ ಉತ್ತರಕಾಂಡ ರಾಜ್ಯಪಾಲರಿಗೆ ದೂರು ನೀಡಿದರೂ ಈ ತನಕ ಪ್ರಕರಣ ದಾಖಲಾಗಿಲ್ಲ. ಈ ಕೃತ್ಯದ ಬಗ್ಗೆ ಪ್ರಧಾನಿ ಯಾವುದೇ ವಿಷಯ ಮಾತನಾಡುವುದಿಲ್ಲ ಎಂದು ಕಿಡಿಕಾರಿದರು. 

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಸುಂದರ್ ಮಾಸ್ತರ್, ಸಂಜೀವ ಬಳ್ಕೂರು, ಸುಂದರ ಮಾಸ್ಟರ್‌, ಹುಸೇನ್‌ ಕೋಡಿ ಬೇಂಗ್ರೆ,ಶ್ಯಾಮರಾಜ್‌ ಬಿರ್ತಿ, ಅಜೀಜ್‌ ಉದ್ಯಾವರ, ರಾಜು ಬೆಟ್ಟನಮನೆ, ಅಫಾನ್‌, ಕುಶಾಲ್‌ ಮತ್ತಿತರರು ಭಾಗವಹಿಸಿದ್ದರು.

Ads on article

Advertise in articles 1

advertising articles 2

Advertise under the article