-->
ಪುಣೆ ಬಂಟರ ಸಂಘದ ವತಿಯಿಂದ ಸಹಾಯಧನ, ಸಾಧಕರಿಗೆ ಸನ್ಮಾನ

ಪುಣೆ ಬಂಟರ ಸಂಘದ ವತಿಯಿಂದ ಸಹಾಯಧನ, ಸಾಧಕರಿಗೆ ಸನ್ಮಾನ


ಪುಣೆ ಬಂಟರ ಸಂಘದ ಶಕುಂತಲಾ ಜಗನ್ನಾಥ್ ಶೆಟ್ಟಿ ಕಲವೃಕ್ಷ ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನಿಧಿ ವಿತರಣೆ, ಪ್ರತಿಭಾನ್ವಿತ ಮಕ್ಕಳ ಸತ್ಕಾರ, ಸಮಾಜದ ಆರ್ಥಿಕವಾಗಿ ಹಿಂದುಳಿದ ಮಕ್ಕಳ ದತ್ತು ಸ್ವೀಕಾರ, ಸಾಧಕರಿಗೆ ಕಲ್ಪವೃಕ್ಷ ಸೇವಾ ಸಾಧಕ ಪ್ರಶಸ್ತಿ ಸಮಾರಂಭ ಮತ್ತು ಮಹಿಳಾ ವಿಭಾಗದ ಆಯೋಜನೆಯಲ್ಲಿ ಆಟಿಡ್ ಒಂಜಿ ದಿನ ಕಾರ್ಯಕ್ರಮವು ಆ. 1ರಂದು ಪುಣೆ ಬಂಟರ ಸಂಘದ ಓಣಿ ಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕೃತಿಕ ಭವನದಲ್ಲಿ ಜರಗಿತು
.


ಪುಣೆ ಬಂಟರ ಗೌರವಾಧ್ಯಕ್ಷರಾದ ಸಂತೊಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಉಪಸ್ಥಿತಿಯಲ್ಲಿ ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರು ಗುತ್ತು ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಅತಿಥಿಗಳು ಕಲ್ಪವೃಕ್ಷ ದ ಹೂ ಅರಳಿಸುವ ಮೂಲಕ ಉದ್ಘಾಟಿಸಿದರು. ನಂತರ బంಟ ಗೀತೆಯನ್ನು ಹಾಡಲಾಯಿತು.

 ಪುಣೆಯ ಕೆಎಸ್ಎಚ್ ಇಂಟರ್‌ ನ್ಯಾಶನಲ್ ಲಿಮಿಟೆಡ್ ಆಡಳಿತ ನಿರ್ದೇಶಕ ರಾಜೇಶ್ ಕುಶಲ್ ಹೆಗ್ಡೆ, ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಬೆಂಗಳೂರು ಇದರ ಸ್ಥಾಪಕ ಕಾರ್ಯಾಧ್ಯಕ್ಷ ಮತ್ತು ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಆರ್. ಉಪೇಂದ್ರ ಹೆಗ್ಡೆ, ಮಣಿಪಾಲ ಎಚ್ ಪಿ ಆರ್‌ ಗ್ರೂಪ್ ಆಫ್ ಇನ್ ಸ್ಟಿಟ್ಯೂಟ್ ನ ಕಾರ್ಯಾಧ್ಯಕ್ಷ ಹರಿಪ್ರಸಾದ್ ರೈ, ಪುಣೆಯ ಖ್ಯಾತ ಜಾಯಿಂಟ್ ರಿಪ್ಲೇಸ್ಮೆಟ್ ತಜ್ಞ ಮತ್ತು ಆರ್ಥೋಪೆಡಿಕ್ ಸರ್ಜನ್ ಡಾ| ಪ್ರತಿಕ್ ಹೆಗ್ಡೆ, ಮಂಗಳೂರು ಯಮುನಾ ಹೋಮ್ಸ್ ಮತ್ತು ಡಿಸೈನ್ ಪ್ರೈವೇಟ್ ಲಿಮಿಟೆಡ್ ನ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಪುರುಷೋತ್ತಮ ಶೆಟ್ಟಿ, ಪುಣೆ ಶ್ರೀ ಗುರುದೇವ ಸೇವಾ ಬಳಗದ ಉಪಾಧ್ಯಕ್ಷ ಮತ್ತು ಖ್ಯಾತ ಸಮಾಜ ಸೇವಕ ಒಣಿಮಜಲು ರಂಜಿತ್ ಶೆಟ್ಟಿ, ಬಂಟರ ಸಂಘದ ಉಪಾಧ್ಯಕ್ಷರುಗಳಾದ ವಿಶ್ವನಾಥ್ ಶೆಟ್ಟಿ ಮತ್ತು ರಾಮಕೃಷ್ಣ ಶೆಟ್ಟಿ ಗೌರವ ಪ್ರಧಾನ ಕಾರ್ಯದರ್ಶಿ ಸುಧೀರ್‌ ಶೆಟ್ಟಿ ಕಣಂಜಾರ್, ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಕಲ್ಪವೃಕ್ಷ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ್‌ಶೆಟ್ಟಿ ನಿಟ್ಟೆ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಮ್ಮಿ ಎ. ಹೆಗ್ಡೆ, ಕಲವೃಕ್ಷ ಸಮಾಜ ಕಲ್ಯಾಣ ಸಮಿತಿ ಮಹಿಳಾ ಕಾರ್ಯಾಧ್ಯಕ್ಷೆ ಗೀತಾ ಆರ್. ಶೆಟ್ಟಿ, ದಕ್ಷಿಣ, , ಪೂರ್ವ, ಪಶ್ಚಿಮ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳಾದ ಸುಧಾಕರ್‌ಸಿ.ಶೆಟ್ಟಿ, ನಾರಾಯಣ ಹೆಗ್ಡೆ, ಸಂದೇಶ್ ಶೆಟ್ಟಿ ಪ್ರಕಾಶ್ ಶೆಟ್ಟಿ ಪ್ರಾದೇಶಿಕ ಸಮಿತಿಗಳ ಮಹಿಳಾ ಕಾರ್ಯಾಧ್ಯಕ್ಷೆಯರುಗಳಾದ ವಿನೋದಾ ಎಸ್. ಶೆಟ್ಟಿ ಶಾಲಿನಿ ಎಂ. ಶೆಟ್ಟಿ ನಯನ ಸಿ. ಶೆಟ್ಟಿಯವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article