-->
 ಉಡುಪಿ ಜಿಲ್ಲಾ ಹೋಟೆಲ್ ಉದ್ದಿಮೆದಾರರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಉಡುಪಿ ಜಿಲ್ಲಾ ಹೋಟೆಲ್ ಉದ್ದಿಮೆದಾರರ ಸಹಕಾರ ಸಂಘದ ವಾರ್ಷಿಕ ಮಹಾಸಭೆ


ಉಡುಪಿ ಜಿಲ್ಲಾ ಹೋಟೆಲ್  ಉದ್ದಿಮೆದಾರರ ಸಹಕಾರ ಸಂಘದ 2025- 26ನೇ ಸಾಲಿನ ವಾರ್ಷಿಕ ಮಹಾಸಭೆಯು ಉಡುಪಿಯ ಡಯಾನ ಹೋಟೆಲ್ ನ ಸುನಂದಾ ಸಭಾಭವನದಲ್ಲಿ ಸಂಸ್ಥೆಯ  ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.


ಈ ಸಂದರ್ಭದಲ್ಲಿ ಸಂಸ್ಥೆಯು ನಿರಂತರ ಲಾಭದಲ್ಲಿ ನಡೆಯಲು ಸಹಕರಿಸಿದ ಸದಸ್ಯರು, ನಿರ್ದೇಶಕರು, ಪಿಗ್ಮಿ ಸಂಗ್ರಹಕರು ಹಾಗೂ ವ್ಯವಹಾರ ನಡೆಸಿದ ಗ್ರಾಹಕರನ್ನು ಅಭಿನಂದಿಸಿ ಮಾತನಾಡಿದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು , ಉಡುಪಿ ಜಿಲ್ಲೆಯ ಹೋಟೆಲ್ ಉದ್ದಿಮೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಈ  ಸಹಕಾರಿ ಸಂಘದಲ್ಲಿ ತಮ್ಮ ಖಾತೆಯನ್ನು ತೆರೆದು ಸಂಘದ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.


ಸಂಸ್ಥೆಯು ಯಶಸ್ವಿಯಾಗಿ ಇದೀಗ 10ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ವ್ಯವಸ್ಥಿತವಾಗಿ ಸಂಘದ ವತಿಯಿಂದ ಚಿನ್ನಾಭರಣ ಈಡಿನ ಸಾಲ,  ವೈಯಕ್ತಿಕ ಸಾಲ, ವಾಹನ ಖರೀದಿ ಸಾಲ, ವ್ಯಾಪಾರ ಅಭಿವೃದ್ಧಿ ಸಾಲ,  ಜಮೀನು ಅಡಮಾನ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಅಲ್ಲದೆ ಉಳಿತಾಯ ಖಾತೆಯ ಜೊತೆಗೆ ವಿವಿಧ ಠೇವಣಿಗಳು, ಉತ್ತಮ ಆಕರ್ಷಕ ಬಡ್ಡಿ ದರದೊಂದಿಗೆ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೂ ಸರಕಾರದ ನಿಯಮಾವಳಿಯಂತೆ ಅಧಿಕ ಬಡ್ಡಿ ದರ ನೀಡಲಾಗುವುದು ಎಂದು ಅವರು ತಿಳಿಸಿದರು. 


ಕಾರ್ಯಕ್ರಮದಲ್ಲಿ ಹಿರಿಯ ಹೋಟೆಲ್ ಉದ್ಯಮಿ, ಸಂಘದ ಸದಸ್ಯರು ಹಾಗೂ ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಶ್ರೀಧರ್ ಶೇಣವ  ಹಾಗೂ ಜ್ಯೋತಿ ಶೇಣವ ದಂಪತಿಯನ್ನು ಸನ್ಮಾನಿಸಲಾಯಿತು. ಅಲ್ಲದೆ ಸಂಘದ  ನಿರ್ದೇಶಕ ಎಂ.ವಿಠಲ ಪೈ ಹಾಗೂ ಉತ್ತಮ ಸೇವೆ ಸಲ್ಲಿಸಿದ ಸಂಘದ ಸಿಬ್ಬಂದಿ ರೇಷ್ಮಾ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. 


ಸಂಘದ ಉಪಾಧ್ಯಕ್ಷ ಕೆ. ನಾಗೇಶ್ ಭಟ್, ನಿರ್ದೇಶಕರುಗಳಾದ ಹರೀಶ್ ಹೆಗ್ಡೆ, ಬಿ. ಅಶೋಕ್ ಪೈ, ತಲ್ಲೂರು ಶಿವಪ್ರಸಾದ್ ಎಸ್. ಶೆಟ್ಟಿ, ಗಿರಿಜಾ ಶಿವರಾಮ ಶೆಟ್ಟಿ ಹಾಗೂ ಗೋಪಾಲ ಸಿ .ಬಂಗೇರ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ರೇಷ್ಮಾ ಶೆಟ್ಟಿ ವರದಿ ಮಂಡಿಸಿದರು. ಚಂದ್ರಹಾಸ ಶೆಟ್ಟಿ ಸ್ವಾಗತಿಸಿ, ಎಂ . ಕೃಷ್ಣ ಆಳ್ವ ವಂದಿಸಿದರು. ನಿರ್ದೇಶಕರುಗಳಾದ ಸುನಿಲ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Ads on article

Advertise in articles 1

advertising articles 2

Advertise under the article