-->
 ಲಯನ್ಸ್ ಕ್ಲಬ್‌ ಉಡುಪಿ ಅಮೃತ್‌ ಸದಸ್ಯ ಅಜಯ್ ಕಾಮತ್ ಅವರಿಂದ ಸಿಸಿಕ್ಯಾಮರಾ ಕೊಡುಗೆ

ಲಯನ್ಸ್ ಕ್ಲಬ್‌ ಉಡುಪಿ ಅಮೃತ್‌ ಸದಸ್ಯ ಅಜಯ್ ಕಾಮತ್ ಅವರಿಂದ ಸಿಸಿಕ್ಯಾಮರಾ ಕೊಡುಗೆ


ಲಯನ್ಸ್ ಕ್ಲಬ್ ಉಡುಪಿ ಅಮೃತ್‌ನ ಸದಸ್ಯ ಅಜಯ್ ಕಾಮತ್ ಅವರ ವತಿಯಿಂದ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಲೆವೂರು ಗಣೇಶೋತ್ಸವ ಕಟ್ಟೆಯ ಬಳಿ ಅಳವಡಿಸಲಾಗಿರುವ ಸಿಸಿಕ್ಯಾಮರಾವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು.


ಗಣೇಶೋತ್ಸವ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಿಸಿಕ್ಯಾಮರಾ ಅಳವಡಿಸಿರುವುದು ಸಹಕಾರಿಯಾಗಲಿದೆ. ಪ್ರದೇಶದಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ತನಿಖೆಗೆ ಸಹಕಾರಿಯಾಗುವಂತೆ ಸಿಸಿಕ್ಯಾಮರಾ ಕಾರ್ಯನಿರ್ವಹಿಸಲಿದೆ.


ಈ ಸಂದರ್ಭದಲ್ಲಿ ಮಣಿಪಾಲ ಠಾಣೆಯ ಎಸ್ಐ ತಿಮ್ಮೇಶ್, ಲಯನ್ಸ್ ಕ್ಲಬ್ ಉಡುಪಿ ಅಮೃತ್ ಅಧ್ಯಕ್ಷೆ ಚಂದ್ರಿಕ ಜಯಪ್ರಕಾಶ್, ಕಾರ್ಯದರ್ಶಿ ಯತೀಶ್ ಕುಮಾರ್, ಸದಸ್ಯರಾದ ಹರೀಶ್ ಎಂ.ಯು., ಜಯಪ್ರಕಾಶ್ ಭಂಡಾರಿ, ಪುಷ್ಪರಾಜ್, ಅಶೋಕ್ ಕುಮಾರ್ ಹಾಗೂ ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


Ads on article

Advertise in articles 1

advertising articles 2

Advertise under the article