-->
 ಉದ್ಯಾವರದಲ್ಲಿ ಅ.25ರಂದು ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಪ್ರದರ್ಶನ

ಉದ್ಯಾವರದಲ್ಲಿ ಅ.25ರಂದು ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಪ್ರದರ್ಶನ


ಕಲಾ ಸಂಸ್ಥೆ ನಿರಂತರ ಉದ್ಯಾವರದ ನೇತೃತ್ವದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಹಾಗೂ ಲಯನ್ಸ್ ಕ್ಲಬ್ ಉದ್ಯಾವರ ಸನ್‌ಶೈನ್ ಸಹಭಾಗಿತ್ವದಲ್ಲಿ ಅ.25ರ ಭಾನುವಾರ ಸಂಜೆ 6.15ಕ್ಕೆ ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ವಠಾರದಲ್ಲಿ ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಪ್ರದರ್ಶನಗೊಳ್ಳಲಿದೆ.

ನಟ ಪ್ರಕಾಶ್ ರಾಜ್ ಅರ್ಪಿಸುವ ಈ ನಾಟಕವನ್ನು ನಿರ್ದಿಗಂತ ತಂಡ ಅಭಿನಯಿಸಲಿದ್ದು, ಖ್ಯಾತ ರಂಗ ನಿರ್ದೇಶಕ ಅರುಣ್ ಲಾಲ್ ನಿರ್ದೇಶನ ಮಾಡಲಿದ್ದಾರೆ. ವಿಭಿನ್ನ ಕಥಾವಸ್ತು ಹಾಗೂ ರಂಗಪ್ರಯೋಗದ ಮೂಲಕ ಗಮನ ಸೆಳೆಯಲಿರುವ ಈ ನಾಟಕವನ್ನು ಕಲಾಭಿಮಾನಿಗಳು ಉಚಿತವಾಗಿ ವೀಕ್ಷಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article