-->
ಉಡುಪಿ ಮೋಟರ್ಸ್ ನಲ್ಲಿ ಯಮಹಾ YZF -R2 ಬೈಕ್ ಗಳ ಅನಾವರಣ

ಉಡುಪಿ ಮೋಟರ್ಸ್ ನಲ್ಲಿ ಯಮಹಾ YZF -R2 ಬೈಕ್ ಗಳ ಅನಾವರಣ


ಯಮಹಾ ಮೋಟರ್ಸ್ ಅಧೀಕೃತ ಡೀಲರ್ ಉಡುಪಿ ಮೋಟರ್ಸ್ ಆಧುನಿಕ ತಂತ್ರಜ್ಞಾನದ YZF -R2 ಬೈಕುಗಳನ್ನು ಉಡುಪಿ ಮಾರುಕಟ್ಟೆಗೆ ಪರಿಚಯಿಸಿದ್ದು, 

ಕರ್ನಾಟಕ ಸರಕಾರದ ಉಡುಪಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಬೈಕುಗಳನ್ನು ಅನಾವರಣಗೊಳಿಸಿದರು. 


ರಮೇಶ್ ಕಾಂಚನ್ ಮಾತನಾಡಿ ಮಾರಾಟದ ಜೊತೆಗೆ ಮಾರಾಟೋತ್ತರ ಸೇವೆಗೂ ಹೆಸರಾಗಿರುವ ಉಡುಪಿ ಮೋಟರ್ಸ್ ಕಳೆದ ಹಲವಾರು ದಶಕಗಳಿಂದ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದು, ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. 

ಹರೀಶ್ ಕಿಣಿ ಮಾತನಾಡಿ, ಯಮಹಾ ಮೋಟರ್ಸ್ ಇಂದಿನ ಜೆನ್- ಝೀ ಯುವಕರ ಆಯ್ಕೆಗೆ ಅನುಸಾರವಾಗಿ ಸ್ಪೋರ್ಟಿ ವಿನ್ಯಾಸ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಪವರ್ ಬೈಕುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ದ್ವಿಚಕ್ರ ಮಾರುಕಟ್ಟೆಯಲ್ಲಿ ಸಧೃಡವಾದ ಹೆಜ್ಜೆಯನ್ನಿಡುತ್ತಿದೆ. ಅದಕ್ಕೆ ಪೂರಕವಾಗಿ ಉಡುಪಿ ಮೋಟರ್ಸ್ ತನ್ನ ಅನುಭವದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 


ಈ ಸಂದರ್ಭದಲ್ಲಿ ಗ್ರಾಹಕರಾದ ನೀತಾ ಹರೀಶ್ ಕಿಣಿ ಅವರಿಗೆ ಹೊಸ ಯಮಹಾ ಫ್ಯಾಸಿನೊ 125 Fi ಸ್ಕೂಟರ್ ಹಸ್ತಾಂತರಿಸಲಾಯಿತು.

ಉಡುಪಿ ಮೋಟರ್ಸ್ ಪಾಲುದಾರರಾದ ಜಯಪ್ರಕಾಶ್ ಭಂಡಾರಿ, ಟೆರೆನ್ಸ್ ಸುವಾರೀಸ್, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಸಿಬ್ಬಂದಿ ವಿಜಯ ಕುಮಾರ್ ಆರ್., ದಿನೇಶ್ ಕಿಣಿ ಮತ್ತಿತರರು ಉಪಸ್ಥಿತರಿದ್ದರು. ಕಸ್ಟಮರ್ ರಿಲೇಶನ್ ಮ್ಯಾನೇಜರ್ ದೀಕ್ಷಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 


R2 ಬೈಕುಗಳು ಸ್ಟ್ರೀಟ್, ಸ್ಪೋರ್ಟ್ ಹಾಗೂ ರೈನ್ ಎಂಬ ರೈಡಿಂಗ್ ಮೋಡ್ ಗಳಲ್ಲಿ ಲಭ್ಯವಿದೆ.

ಯಮಹಾ R2, R15ಗಿಂತ ಹೆಚ್ಚಿನ ಕಾರ್ಯಕ್ಷಮತೆಯ ಸ್ಪೋರ್ಟ್ಸ್ ಬೈಕ್ ಬಯಸುವವರಿಗೆ ಸೂಕ್ತವಾಗಿದೆ. 204 ಸಿಸಿ ಇಂಜಿನ್, ಕಡಿಮೆ ತೂಕ, USD fork, riding modes ಮತ್ತು ಟ್ರಾಕ್ಷನ್ ಕಂಟ್ರೋಲ್ ನಂತಹ ಫೀಚರ್‌ಗಳು ಇದನ್ನು ದೈನಂದಿನ ಬಳಕೆ ಹಾಗೂ ವೀಕೆಂಡ್ ರೈಡ್ ಗಳಿಗೂ ಆಕರ್ಷಕವಾಗಿಸುತ್ತವೆ.

ಯಮಹಾ YZF-R2 ಮೂಲಕ ಯಮಹಾ 200cc ಸ್ಪೋರ್ಟ್ಸ್ ಬೈಕ್ ವಿಭಾಗಕ್ಕೆ ಹೊಸ ಆಯ್ಕೆಯನ್ನು ತಂದಿದೆ. 26.5 PS ಪವರ್, 19.1 Nm ಟಾರ್ಕ್, 149 ಕೆಜಿ ತೂಕ ಇದರ ಪ್ರಮುಖ ಆಕರ್ಷಣೆಗಳು. R15ಗಿಂತ ಮೇಲಿನ ಹಂತಕ್ಕೆ ಹೋಗಲು ಬಯಸುವ ರೈಡರ್‌ಗಳಿಗೆ R2 ಒಂದು ಗಮನಾರ್ಹ ಆಯ್ಕೆಯಾಗಲಿದೆ.





Ads on article

Advertise in articles 1

advertising articles 2

Advertise under the article