-->
ಉಡುಪಿಯಲ್ಲಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ 5ನೇ ಶಾಖೆ ಶುಭಾರಂಭ

ಉಡುಪಿಯಲ್ಲಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ 5ನೇ ಶಾಖೆ ಶುಭಾರಂಭ



ಗ್ರಾಹಕರಿಗೆ ಆರ್ಥಿಕ ಭದ್ರತೆ, ಉತ್ತಮ ಉಳಿತಾಯದ ಅವಕಾಶ ಹಾಗೂ ಸುಲಭ ಸಾಲ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ 5ನೇ ಶಾಖೆಯನ್ನು ಉಡುಪಿಯ ಸನಿಲ್ ಪ್ಲಾಜಾದಲ್ಲಿ ಆರಂಭಿಸಲಾಯಿತು.


ನೂತನ ಶಾಖೆಯನ್ನು ಮೂಲ್ಕಿ ಅರಮನೆಯ ಅರಸ ಎಂ. ದುಗ್ಗಣ್ಣ ಸಾವಂತ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಸ್ಥೆ ಲಾಭದ ಒಂದು ಭಾಗವನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಗಳಿಗೆ ವಿನಿಯೋಗಿಸುವ ಮೂಲಕ ಇತರ ಸಹಕಾರಿ ಸಂಘಗಳಿಗೆ ಮಾದರಿಯಾಗಬೇಕು. ಅಧ್ಯಕ್ಷ ವಸಂತ್ ಬೆರ್ನಾರ್ಡ್ ಹಾಗೂ ಸಿಬ್ಬಂದಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ ಮೂಲಕ ಸಂಸ್ಥೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತಗೊಳಿಸದೆ ರಾಜ್ಯಮಟ್ಟದಲ್ಲಿ ವಿಸ್ತರಿಸುವಂತಾಗಲಿ ಎಂದು ಹಾರೈಸಿದರು.


ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ದೀಪ ಪ್ರಜ್ವಲಿಸಿ ಮಾತನಾಡಿ, ಐದು ವರ್ಷಗಳಲ್ಲಿ ಐದು ಶಾಖೆಗಳನ್ನು ಆರಂಭಿಸುವುದು ಸುಲಭದ ಸಾಧನೆಯಲ್ಲ. ಅಧ್ಯಕ್ಷ ವಸಂತ್ ಬೆರ್ನಾರ್ಡ್, ನಿರ್ದೇಶಕರು ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಪರಿಶ್ರಮದಿಂದ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಹಲವರಿಗೆ ಉದ್ಯೋಗಾವಕಾಶಗಳನ್ನೂ ಕಲ್ಪಿಸಿದೆ ಎಂದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಹಲವು ದಿನಗಳು ಕಾಯಬೇಕಾಗುತ್ತದೆ. ಆದರೆ ಸಹಕಾರಿ ಸಂಸ್ಥೆಗಳು ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸಿ ತ್ವರಿತವಾಗಿ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ನೆರವಾಗುತ್ತವೆ. ಪ್ರಿಯದರ್ಶಿನಿ ಸೊಸೈಟಿ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.

ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಒಕ್ಕೂಟ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಡಾ. ಐಕಳ ಬಾವ ದೇವಿಪ್ರಸಾದ ಶೆಟ್ಟಿ ಅವರು ಪ್ರಿಯದರ್ಶಿನಿ ಸ್ವಸಹಾಯ ಗುಂಪಿಗೆ ಚಾಲನೆ ನೀಡಿ ಮಾತನಾಡಿ, ಗ್ರಾಹಕರು ಸಂಸ್ಥೆಗೆ ಬಂದಾಗ ಪ್ರೀತಿಯಿಂದ ಸೇವೆ ನೀಡುವುದೇ ಪ್ರಿಯದರ್ಶಿನಿಯ ಮೂಲ ಉದ್ದೇಶವಾಗಿದೆ. ಪರಸ್ಪರ ಸಹಕಾರ ಮತ್ತು ಸಹಾಯವೇ ಸಹಕಾರ ತತ್ವದ ಮೂಲ ಆಶಯ. ಈ ತತ್ವವನ್ನು ಮೈಗೂಡಿಸಿಕೊಂಡು ವಸಂತ್ ಬೆರ್ನಾರ್ಡ್ ಅವರು ಹಳೆಯಂಗಡಿಯಲ್ಲಿ ಸಂಸ್ಥೆಯನ್ನು ಸ್ಥಾಪಿಸಿ ಜನರ ವಿಶ್ವಾಸ ಗಳಿಸಿದ್ದಾರೆ. ಮಹಿಳೆಯರ ಸ್ವಾವಲಂಬನೆಗಾಗಿ ಸ್ವಸಹಾಯ ಗುಂಪುಗಳನ್ನು ರಚಿಸಿ ಉತ್ತಮ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ಸಂಸ್ಥೆಯೊಂದನ್ನು ಆರಂಭಿಸುವುದಕ್ಕಿಂತ ಅದನ್ನು ನಿರಂತರವಾಗಿ ಮುನ್ನಡೆಸುವುದು ಸವಾಲಿನ ಕೆಲಸ. ಇಂತಹ ಸಂದರ್ಭದಲ್ಲಿ ಪ್ರಿಯದರ್ಶಿನಿ ಸೊಸೈಟಿ ಉಡುಪಿಯಲ್ಲಿ ಶಾಖೆ ಆರಂಭಿಸಿರುವುದು ಸಂತಸದ ವಿಚಾರ. ಸಂಸ್ಥೆ ಇನ್ನಷ್ಟು ಶಾಖೆಗಳನ್ನು ತೆರೆದು ಬೆಳೆಯಲಿ ಎಂದು ಹಾರೈಸಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜಾ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್., ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ, ಉಡುಪಿ ಜಿಲ್ಲಾ ಕೇಂದ್ರ ಸಹಕಾರಿ ಯೂನಿಯನ್ ಹಾಗೂ ಬಡಗಬೆಟ್ಟು ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಪಡುಕುತ್ತಾರು ಶ್ರೀ ಸರಸ್ವತಿ ಕೋ-ಆಪರೇಟಿವ್ ಸೊಸೈಟಿಯ ಪ್ರತಿನಿಧಿ ಬಿ. ಸೂರ್ಯಕುಮಾರ್, ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ, ಹೈಟೆಕ್ ಮೆಡಿಕೇರ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಟಿ.ಎಸ್. ರಾವ್, ಕೊರಂಗ್ರಪಾಡಿ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಶ್ರೀಧರ್ ದೇವಾಡಿಗ, ಹೋಮಿಯೋಪತಿ ವೈದ್ಯ ಡಾ. ಬೆರಿಲ್ ಎ. ಬೆರ್ನಾರ್ಡ್ ಹಾಗೂ ಕಟ್ಟಡದ ಮಾಲೀಕ ಶಂಭು ಎ. ಸನಿಲ್ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ, 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಪತ್ತಿನ ಸಹಕಾರ ಸಂಘ ಪ್ರಶಸ್ತಿಯನ್ನು ಪಡೆದಿದೆ. ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ 2023-24, 2024-25 ಹಾಗೂ 2025-26ನೇ ಸಾಲಿನ ವಿಶಿಷ್ಟ ಸಾಧನ ಪ್ರಶಸ್ತಿಗಳನ್ನೂ ತನ್ನದಾಗಿಸಿಕೊಂಡಿದೆ.

ಸಂಸ್ಥೆಯ ಅಧ್ಯಕ್ಷ ಎಚ್. ವಸಂತ್ ಬೆರ್ನಾರ್ಡ್, ಉಪಾಧ್ಯಕ್ಷ ವಿಜಯಕುಮಾರ್ ಸನಿಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ, ಆಡಳಿತ ಮಂಡಳಿಯ ನಿರ್ದೇಶಕರಾದ ಉಮಾನಾಥ ಜೆ. ಶೆಟ್ಟಿಗಾರ್, ಧನಂಜಯ ಮಟ್ಟು, ಗೌತಮ್ ಜೈನ್, ಗಣೇಶ್ ಪ್ರಸಾದ್ ದೇವಾಡಿಗ, ಜೈಕೃಷ್ಣ ಕೋಟ್ಯಾನ್, ಡಾ. ಶರೀಲ್ ಅಯೋನ ಐಮನ್, ರೇಖಾ ಶೆಟ್ಟಿ, ಹರೀಶ್ ಎನ್. ಪುತ್ರನ್, ನವೀನ್ ಸಾಲಿಯಾನ್ ಪಂಜ, ಮೋಹನ್ ದಾಸ್, ಅನಿಲ್ ಪೂಜಾರಿ ಸಸಿಹಿತ್ಲು, ರಜಿಯಾ ಬಾನು, ಕರಿಯ ಕಾಡಿಗ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಸೊಸೈಟಿ ಅಧ್ಯಕ್ಷರಾದ ಎಚ್ ವಸಂತ್ ಬೆರ್ನಾರ್ಡ್ ಸ್ವಾಗತಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ ವಂದಿಸಿದರು.

ಶಾಖಾ ಪ್ರಬಂಧಕರಾದ ನಿಶಾ ಸುಹೈಲ್ ಡೇನಿಯಲ್ ಕಾರ್ಯಕ್ರಮ ನಿರೂಪಿಸಿದರು.

ಲೆಕ್ಕಿಗರಾದ ಲೋಲಾಕ್ಷಿ, ವಿವಿಧ ಶಾಖಾ ಪ್ರಬಂಧಕರಾದ ಮೋಹನ್‌ದಾಸ್, ಪ್ರಜ್ಞಾಶ್ರೀ, ಅಕ್ಷತಾ ಶೆಟ್ಟಿ ಎಮ್, ಅಭಿಷ್ಟಾ ಜೈನ್, ಅಂಜಲಿ ಎಸ್ ದೇವಾಡಿಗ ಸಹಕರಿಸಿದರು.

ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಗ್ರಾಹಕರಿಗಾಗಿ ಉಳಿತಾಯ ಖಾತೆ, ನಿರಖು ಠೇವಣಿ, ಮಾಸಿಕ ಠೇವಣಿ ಹಾಗೂ ಅಮೃತ ನಗದು ಪತ್ರ ಸೇರಿದಂತೆ ವಿವಿಧ ಯೋಜನೆಗಳನ್ನು ಪರಿಚಯಿಸಿದೆ. 2026ರ ನವೆಂಬರ್ 15ರವರೆಗೆ ಆರಂಭಿಸುವ ನಿರಖು ಠೇವಣಿಗಳಿಗೆ ಶೇ.10ರಷ್ಟು ಬಡ್ಡಿದರ ನೀಡುವ ವಿಶೇಷ ಕೊಡುಗೆಯನ್ನು ಪ್ರಕಟಿಸಿದೆ. ಈ ಕೊಡುಗೆಗೆ ಅನ್ವಯಿಸುವ ಷರತ್ತುಗಳು ಮತ್ತು ಅವಧಿಯ ವಿವರಗಳನ್ನು ಸಂಸ್ಥೆಯಿಂದ ಖಚಿತಪಡಿಸಿಕೊಳ್ಳಬಹುದು.

ಉಳಿತಾಯ ಖಾತೆಗಳಿಗೆ ಠೇವಣಿ ಅವಧಿಗೆ ಅನುಗುಣವಾಗಿ ಶೇ.5.50ರಿಂದ ಶೇ.7ರವರೆಗೆ ಬಡ್ಡಿದರ ನಿಗದಿಪಡಿಸಲಾಗಿದೆ. ನಿರಖು ಠೇವಣಿಗಳಿಗೆ 12ರಿಂದ 24 ತಿಂಗಳ ಅವಧಿಗೆ ಶೇ.9.50, 24ರಿಂದ 36 ತಿಂಗಳ ಅವಧಿಗೆ ಶೇ.9.60 ಹಾಗೂ 36 ತಿಂಗಳ ಮೇಲ್ಪಟ್ಟ ಅವಧಿಗೆ ಶೇ.9.75ರಷ್ಟು ಬಡ್ಡಿದರ ಪ್ರಕಟಿಸಲಾಗಿದೆ. ಮಾಸಿಕ ಠೇವಣಿ ಮತ್ತು ಅಮೃತ ನಗದು ಪತ್ರ ಯೋಜನೆಗಳಿಗೂ ಆಕರ್ಷಕ ಬಡ್ಡಿದರದ ಸೌಲಭ್ಯವಿದೆ.

ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸುತ್ತಿರುವ ಸಂಸ್ಥೆ, ಮಹಿಳೆಯರ ಸ್ವಾವಲಂಬನೆಗಾಗಿ ಸ್ವಸಹಾಯ ಗುಂಪುಗಳಿಗೆ ನೆರವು ನೀಡುತ್ತಿದೆ. ಕೃಷಿ ಸೇರಿದಂತೆ ವಿವಿಧ ಅಗತ್ಯಗಳಿಗೆ ಸಾಲ ಸೌಲಭ್ಯಗಳ ಜೊತೆಗೆ ಚಿನ್ನಾಭರಣಗಳ ಭದ್ರತೆಗಾಗಿ ಸೇಫ್ ಲಾಕರ್ ವ್ಯವಸ್ಥೆಯನ್ನೂ ಕಲ್ಪಿಸಿದೆ.

ವಿದ್ಯಾರ್ಥಿಗಳಿಗೆ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆ, ಮೊಬೈಲ್ ಬ್ಯಾಂಕಿಂಗ್, ಯುಪಿಐ ಪಾವತಿ ಹಾಗೂ ಸ್ಕ್ಯಾನ್ ಆ್ಯಂಡ್ ಪೇ ಸೌಲಭ್ಯಗಳು ಲಭ್ಯವಿವೆ. ಗ್ರಾಹಕರ ಅನುಕೂಲಕ್ಕಾಗಿ ನಿರಂತರ ಬ್ಯಾಂಕಿಂಗ್ ವ್ಯವಹಾರ ಮತ್ತು ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನೂ ಹೊಂದಿದೆ.

ಹಳೆಯಂಗಡಿ ಕೇಂದ್ರವಾಗಿಟ್ಟುಕೊಂಡು ಪಡುಬಿದ್ರಿ, ಕಿನ್ನಿಗೋಳಿ, ಮೂಲ್ಕಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶಾಖೆಗಳನ್ನು ಹೊಂದಿರುವ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ, ಇದೀಗ ಉಡುಪಿಯಲ್ಲೂ ತನ್ನ ಸೇವೆಯನ್ನು ವಿಸ್ತರಿಸಿದೆ.

Ads on article

Advertise in articles 1

advertising articles 2

Advertise under the article