-->
ವಿದ್ಯುತ್ ಆಘಾತ: ಇಬ್ಬರು ದುರ್ಮರಣ, ಬಾಲಕ ಗಂಭೀರ

ವಿದ್ಯುತ್ ಆಘಾತ: ಇಬ್ಬರು ದುರ್ಮರಣ, ಬಾಲಕ ಗಂಭೀರ


ವಿದ್ಯುತ್ ಅವಘಡದಿಂದಾಗಿ ಇಬ್ಬರು ಸಾವನ್ನಪ್ಪಿ ಬಾಲಕನೋರ್ವ ಗಂಭೀರ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಬೊಮ್ಮೆಟ್ಟಿಯಲ್ಲಿ ನಡೆದಿದೆ.

ಮೃತಪಟ್ಟವರನ್ನು ಬೊಮ್ಮೆಟ್ಟಿ ನಿವಾಸಿ ಭರತ್ ಹಾಗೂ ಉಪ್ಪಿನಂಗಡಿ ಮೂಲದ ಗಣೇಶ್ ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತ ಭರತ್ ಉತ್ತಮ ಕ್ರೀಡಾಪಟುವಾಗಿದ್ದು ಗ್ರಾಮದಲ್ಲಿ ‌ಒಳ್ಳೆಯ ಹೆಸರನ್ನು ಗಳಿಸಿಕೊಂಡಿದ್ದಾರೆ. ಹಲವೆಡೆ ಸನ್ಮಾನಗಳೂ ಲಭಿಸಿವೆ. ಮನೆಗೆ ಇವರೇ ಆಧಾರ ಸ್ಥಂಭವಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ತಡರಾತ್ರಿ ನಡೆದಿದ್ದು, ವಿದ್ಯುತ್ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

Ads on article

Advertise in articles 1

advertising articles 2

Advertise under the article