-->
 ದೊಡ್ಡಣಗುಡ್ಡೆ ಪ್ರಜ್ಞಾ ಶಾಲೆಯಲ್ಲಿ ಲಯನ್ಸ್ ಶಾಂತಿ ಪೋಸ್ಟರ್ ಸ್ಪರ್ಧೆ

ದೊಡ್ಡಣಗುಡ್ಡೆ ಪ್ರಜ್ಞಾ ಶಾಲೆಯಲ್ಲಿ ಲಯನ್ಸ್ ಶಾಂತಿ ಪೋಸ್ಟರ್ ಸ್ಪರ್ಧೆ


ಲಯನ್ಸ್ ಇಂಟರ್ನ್ಯಾಷನಲ್ ವತಿಯಿಂದ ಲಯನ್ಸ್ ಕ್ಲಬ್ ಬನ್ನಂಜೆ ಟೈಗರ್ಸ್ ಆಶ್ರಯದಲ್ಲಿ 2026-27ನೇ ಸಾಲಿನ ವಿಶ್ವಪ್ರಸಿದ್ಧ ಶಾಂತಿ ಪೋಸ್ಟರ್ ಸ್ಪರ್ಧೆ ದೊಡ್ಡಣಗುಡ್ಡೆಯ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.


ಈ ವರ್ಷದ ಸ್ಪರ್ಧೆಯ ವಿಷಯವಾದ ‘Harmony in Humanity – ಮಾನವೀಯತೆಯಲ್ಲಿ ಸಾಮರಸ್ಯ’ ಎಂಬ ಪರಿಕಲ್ಪನೆಯಡಿ 11ರಿಂದ 13 ವರ್ಷದ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. ತಮ್ಮ ಕಲ್ಪನೆ ಮತ್ತು ಸೃಜನಶೀಲತೆಯನ್ನು ಬಣ್ಣಗಳ ಮೂಲಕ ಅಭಿವ್ಯಕ್ತಿಸಿದ ವಿದ್ಯಾರ್ಥಿಗಳು ಶಾಂತಿ, ಸಹಬಾಳ್ವೆ, ಮಾನವೀಯತೆ ಹಾಗೂ ಸಾಮರಸ್ಯದ ಮಹತ್ವವನ್ನು ಚಿತ್ರಗಳ ಮೂಲಕ ಮನಮುಟ್ಟುವಂತೆ ಅನಾವರಣಗೊಳಿಸಿದರು.


ಸ್ಪರ್ಧೆಯಲ್ಲಿ 7ನೇ ತರಗತಿಯ ಸರಜೀತ್ ಮಂಡಲ್ ಪ್ರಥಮ, 6ನೇ ತರಗತಿಯ ಸಾನಿಕಾ ದ್ವಿತೀಯ ಹಾಗೂ 5ನೇ ತರಗತಿಯ ದೀಕ್ಷಾ ತೃತೀಯ ಸ್ಥಾನ ಗಳಿಸಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರೋತ್ಸಾಹಿಸಲಾಯಿತು.

ಇದೇ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕ ಶ್ರೀ ಶ್ರೀ ರಮಾನಂದ ಗುರೂಜಿ ಅವರನ್ನು ಲಯನ್ಸ್ ಕ್ಲಬ್ ಬನ್ನಂಜೆ ಟೈಗರ್ಸ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. 

ಕೋ-ಆರ್ಡಿನೇಟರ್ ಕುಸುಮಾ ನಾಗರಾಜ್, ಪ್ರಾಂಶುಪಾಲೆ ಉಷಾ ರಾಮಾನಂದ, ಲಯನ್ಸ್ ಕ್ಲಬ್ ಬನ್ನಂಜೆ ಟೈಗರ್ಸ್ ಅಧ್ಯಕ್ಷೆ ಸುಮಾಲಿನಿ ದಯಾನಂದ್, ಕಾರ್ಯದರ್ಶಿ ಅನುಪಮ ಜಯಕುಮಾರ್, ಕೋಶಾಧಿಕಾರಿ ರಮಾದೇವಿ ಹಾಗೂ ಸದಸ್ಯರಾದ ದಯಾನಂದ ಮತ್ತು ವಿನೋದ್ ಶೆಟ್ಟಿ ಉಪಸ್ಥಿತರಿದ್ದರು.


 

Ads on article

Advertise in articles 1

advertising articles 2

Advertise under the article