-->
ಮಲ್ಪೆ- ಪಡುಕರೆಯಲ್ಲಿ ‘ಸಿರೆನಾ ಲಕ್ಷುರಿ ಬೀಚ್ ರೆಸಾರ್ಟ್’ ಲೋಕಾರ್ಪಣೆ

ಮಲ್ಪೆ- ಪಡುಕರೆಯಲ್ಲಿ ‘ಸಿರೆನಾ ಲಕ್ಷುರಿ ಬೀಚ್ ರೆಸಾರ್ಟ್’ ಲೋಕಾರ್ಪಣೆ


ಶ್ಯಾಮಿಲಿ ಸಮೂಹ ಸಂಸ್ಥೆಯ ಸಹಸಂಸ್ಥೆಯಾದ ಉಡುಪಿಯ ಕೋಸ್ಟಲ್‌ವುಡ್ ರೆಸಾರ್ಟ್‌ನ ಅತ್ಯಾ ಧುನಿಕ ಶೈಲಿಯ ಹೊಸ ಐಷಾರಾಮಿ ‘ಸಿರೆನಾ ಲಕ್ಷುರಿ ಬೀಚ್ ರೆಸಾರ್ಟ್’ ಉಡುಪಿಯ ಮಲ್ಪೆ ಕಡಲ ಕಿನಾರೆ ಸಮೀಪದ ಪಡುಕರೆ ಶಾಂತಿನಗರದಲ್ಲಿ ಇಂದು ಶುಭಾರಂಭಗೊಂಡಿತು.


ಶ್ಯಾಮಿಲಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ| ಜಿ. ಶಂಕರ್, ಪತ್ನಿ ಶಾಲಿನಿ ಜಿ. ಶಂಕರ್, ಪುತ್ರಿ ಶ್ಯಾಮಿಲಿ ಶಂಕರ್ ಅವರು ಐಷಾರಾಮಿ ರೆಸಾರ್ಟ್ ಉದ್ಘಾಟಿಸಿದರು. 

ಬಳಿಕ ಡಾ. ಜಿ. ಶಂಕರ್ ಮಾತನಾಡಿ, ದೈವ-ದೇವರ ಅನುಗ್ರಹ ಹಾಗೂ ಹಿರಿಯರ ಪ್ರೇರಣೆಯಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ. ರತ್ನಗಿರಿಯಿಂದ ಕೇರಳದವರೆಗೆ ಈ ಮಾದರಿಯ ರೆಸಾರ್ಟ್‌ಗಳು ಇಲ್ಲ. ಪಡುಕರೆಯಲ್ಲಿ ಸಿರೆನಾ ಲಕ್ಷುರಿ ಬೀಚ್ ರೆಸಾರ್ಟ್ ಆರಂಭಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವುದರ ಜತೆಗೆ ಇಲ್ಲಿನ ಪ್ರವಾಸಿ ತಾಣಗಳನ್ನು ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಉದ್ದೇಶವಿದೆ. 2018ರಲ್ಲೇ ಈ ಜಾಗ ಮಂಜೂರಾಗಿದ್ದು, ಜಿಎಸ್‌ಟಿ ಸಹಿತ ಈವರೆಗೆ 1 ಕೋಟಿಗೂ ಅಧಿಕ ಸೇವಾ ಶುಲ್ಕ ಪಾವತಿಸಲಾಗಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಹಾಗೂ ಮುಖ್ಯ ಸಚೇತಕ ಮಂಜುನಾಥ ಭಂಡಾರಿ ಮಾತನಾಡಿ, ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಸ್ಟಾರ್ ಹೋಟೆಲ್‌ಗಳು ಹಾಗೂ ಬ್ರಾಂಡೆಡ್ ರೆಸಾರ್ಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಪ್ರವಾಸಿಗರನ್ನು ಆಕರ್ಷಿಸುವುದರ ಜತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಡಾ. ಜಿ. ಶಂಕರ್ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಸಿರೆನಾ ರೆಸಾರ್ಟ್ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಶಾಸಕ ಯಶಪಾಲ್ ಎ. ಸುವರ್ಣ ಮಾತನಾಡಿ, ಪಡುಕರೆ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶಗಳಿದ್ದು, ಸ್ಥಳೀಯರಿಗೆ ಅನುಕೂಲವಾಗುವ ರೀತಿಯಲ್ಲಿ ರೆಸಾರ್ಟ್ ರೂಪುಗೊಂಡಿದೆ ಎಂದರು.

ಸಮಾರಂಭದಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಐವನ್ ಡಿ’ಸೋಜಾ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ. ಗಫೂರ್, ಕೆ. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಕೆ. ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ನಟ ರೂಪೇಶ್ ಶೆಟ್ಟಿ, ಉಜ್ವಲ್ ಬಿಲ್ಡರ್ಸ್ ನ ಪುರುಷೋತ್ತಮ್ ಶೆಟ್ಟಿ, ಎಡ್ಲಿನ್ ಕರ್ಕಡ, ಆನಂದ್ ಸಿ. ಕುಂದರ್, ಮದನ್ ಕುಮಾರ್, ಜಯ ಸಿ. ಕೋಟ್ಯಾನ್, ಮೋಹನ್ ಬೆಂಗ್ರೆ, ಹಟ್ಟಿಯಂಗಡಿ ಮತ್ತು ಬಾರ್ಕೂರು ಮೊಗವೀರ ಸಂಘಟನೆಗಳ ಅಧ್ಯಕ್ಷ ಸತೀಶ್ ಅಮೀನ್, ಕಿಶೋರ್, ನಾಗರಾಜ್ ಸುವರ್ಣ, ಆಳಸಮುದ್ರ ಮೀನುಗಾರರ ಸಂಘದ ಅಧ್ಯಕ್ಷ ಕರುಣಾಕರ ಸಾಲ್ಯಾನ್, ತ್ರಿಸೆಂಟಿ ಬೋಟ್ ಮಾಲಕರ ಸಂಘದ ಅಧ್ಯಕ್ಷ ಕೃಷ್ಣ ಜಿ. ಕೋಟ್ಯಾನ್, ಹರೀಶ್ಚಂದ್ರ, ಸಾಧು ಸಾಲ್ಯಾನ್, ಬಾಲಕೃಷ್ಣ ಬಂಗೇರ, ಮಹಿಳಾ ಮೀನುಗಾರರ ಸಂಘದ ಅಧ್ಯಕ್ಷೆ ಬೇಬಿ ಸಾಲ್ಯಾನ್ ಹಾಗೂ ಕಿರಣ್ ಕಾಂಚನ್ ಉಪಸ್ಥಿತರಿದ್ದರು.

ಉದ್ಘಾಟನ ಸಮಾರಂಭದಲ್ಲಿ ವಿಶೇಷ ಆಕರ್ಷಣೆಯಾಗಿ ನಟ, ನಿರ್ದೇಶಕ ರೂಪೇಶ್ ಶೆಟ್ಟಿ, ಪ್ರೇಮದ ಊರಲಿ ಸಿನೆಮಾ ಖ್ಯಾತಿಯ ನಾಯಕ ಶ್ರೀರಾಮ್ ಹಾಗೂ ನಾಯಕಿ ತಪಸ್ವಿನಿ ಪೂಣಚ್ಚ ಪಾಲ್ಗೊಂಡಿದ್ದರು. 

ಜನರ ಅನುಕೂಲಕ್ಕೆ ತಕ್ಕಂತೆ ಸ್ಟೈಸ್‌ವೇವ್ ಲಾಂಜ್ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಮಲ್ಟಿಕ್ಯುಸಿನ್ ಬಾರ್ ಮತ್ತು ವೆಜ್ ರೆಸ್ಟೋರೆಂಟ್, ಆಕರ್ಷಕ ಕೋಸ್ಟಗ್ರಾಂಡ್ ಕಾಫಿ ಶಾಪ್, 400ಕ್ಕೂ ಅಧಿಕ ಕಾರುಗಳು / ದ್ವಿಚಕ್ರ ವಾಹನಗಳಿಗಾಗಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಸ್ಪಾ, ಸ್ವಿಮ್ಮಿಂಗ್ ಫೂಲ್, ಜಿಮ್ ಮತ್ತು ಮಕ್ಕಳ ಆಟದ ಪಾರ್ಕ್‌ನ ವ್ಯವಸ್ಥೆ, ಕಾರ್ಪೋರೇಟ್ ಸಂಸ್ಥೆಗಳ ಸಭೆ, ಸಮಾರಂಭಗಳಿಗೆ ಅನುಕೂಲವಾಗುವಂತಹ ಬೋರ್ಡ್ ರೂಮ್/ಕಾನ್ಸರೆನ್ಸ್ ಹಾಲ್, ಸಸ್ಯಾಹಾರ ಮತ್ತು ಮಾಂಸಾಹಾರಗಳಿಗೆ ವಿಶಾಲವಾದ ಪ್ರತ್ಯೇಕ ಅಡುಗೆ ಕೋಣೆಯ ವ್ಯವಸ್ಥೆ ಇದೆ. ಸಂಪೂರ್ಣ ಹವಾನಿಯಂತ್ರಿತ, 400ಕ್ಕೂ ಮಿಕ್ಕಿ ಜನರು ಆಸೀನರಾಗುವುದಕ್ಕೆ ಬೇಕಾದ ವ್ಯವಸ್ಥೆಯುಳ್ಳ ಆರೆಲಿಯಾ ಬ್ಯಾಂಕ್ವೆಟ್‌ ಹಾಲ್‌, ಸಭಾಂಗಣದ ಸನಿಹದಲ್ಲೇ ಅನುಗ್ರಹದಾತ ಪ್ರಸನ್ನ ಗಣಪತಿ ಮಂದಿರ, ಮೆಹೆಂದಿ, ಹಳದಿ, ಡೆಸ್ಟಿನೇಶನ್ ಮ್ಯಾರೇಜ್, ಮ್ಯಾರೇಜ್ ರಿಸೆಪ್ಯನ್ ಸಹಿತ ಇನ್ನಿತರ ಶುಭ ಸಮಾರಂಭಗಳಿಗೆ ಅನುಕೂಲವಾಗುವ ಆಕರ್ಷಕ, ಹಚ್ಚ ಹಸುರಿನ ಸಿರೆನಾ ಗ್ರೀನ್ಸ್ ಓಪನ್ ಗಾರ್ಡನ್, ಸುಸಜ್ಜಿತವಾದ ಸುಮಾರು 55 ಹವಾನಿಯಂತ್ರಿತ ಡಿಲಕ್ಸ್ ರೂಮ್‌ಗಳನ್ನು ಹೊಂದಿದೆ. ಕೈಗೆಟಕುವ ದರದಲ್ಲಿ ಸಕಲ ಸೌಲಭ್ಯಗಳು ದೊರಕಲಿವೆ.

Ads on article

Advertise in articles 1

advertising articles 2

Advertise under the article