
Bangalore: ಮುಸುಕುಧಾರಿಗಳಿಂದ ಚಿನ್ನದಂಗಡಿ ದರೋಡೆ; ಪೊಲೀಸರಿಂದ ಪರಿಶೀಲನೆ
28/07/2025
ಬೆಂಗಳೂರಿನ ನೆಲಮಂಗಲ ಮಾಗಡಿ ರಸ್ತೆಯಲ್ಲಿ ಚಿನ್ನದಂಗಡಿ ರಾತ್ರಿ ಮುಚ್ಚುವ ವೇಳೆ ಮುಸುಕುಧಾರಿಗಳು ದಾಳಿ ನಡೆಸಿ ಚಿನ್ನಾಭರಣಗಳನ್ನು ದರೋಡೆಗೈದಿದ್ದಾರೆ.
ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಗಡಿ ರಸ್ತೆಯ ಮಾಚೋಹಳ್ಳಿ ಗೇಟ್‌ನ ರಾಮ್ ಜ್ಯುವೆಲ್ಲರಿ ಶಾಪ್ ನಲ್ಲಿ 24ರ ರಾತ್ರಿ 8 ರಿಂದ 9 ಗಂಟೆಯೊಳಗೆ ಘಟನೆ ನಡೆದಿದೆ. ಆರೋಪಿಗಳು ಕೇವಲ 16 ಸೆಕೆಂಡ್‌ಗಳಲ್ಲಿ ಕೃತ್ಯ ಎಸಗಿ ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶಾಪ್‌ಗೆ ಗನ್ ಹಿಡಿದು ನುಗ್ಗಿದ ಮೂವರು ದರೋಡೆ ಕೋರರು ಟೇಬಲ್ ಮೇಲಿದ್ದ ಚಿನ್ನವನ್ನು ಬಾಚಿಕೊಂಡು, ಅಂಗಡಿ ಮಾಲೀಕ ಮತ್ತು ಸಿಬ್ಬಂದಿಯನ್ನು ತಳ್ಳಿ ಪರಾರಿಯಾಗಿದ್ದಾರೆ. ಕೂಗಾಟ ಕೇಳಿ ಪಕ್ಕದ ಅಂಗಡಿಯ ಹುಡುಗ ಬಂದಿದ್ದು, ಆತನನ್ನೂ ತಳ್ಳಿ, ಚಾಕುವಿನಲ್ಲಿ ಗಾಯ ಮಾಡಿ, ಸಿಕ್ಕ ಚಿನ್ನವನ್ನು ದೋಚಿ ಮೂವರು ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಮಾದನಾಯಕನ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.