Bangalore: ನಾಳೆಯಿಂದ ಅಟೋ ಪ್ರಯಾಣ ದುಬಾರಿ; ಜಿಲ್ಲಾಧಿಕಾರಿಗಳಿಂದ ಪ್ರಯಾಣ ದರ ಪರಿಷ್ಕರಣೆ

Bangalore: ನಾಳೆಯಿಂದ ಅಟೋ ಪ್ರಯಾಣ ದುಬಾರಿ; ಜಿಲ್ಲಾಧಿಕಾರಿಗಳಿಂದ ಪ್ರಯಾಣ ದರ ಪರಿಷ್ಕರಣೆ


ಬೆಂಗಳೂರಿನಲ್ಲಿ ನಾಳೆಯಿಂದ (ಆ.1) ಆಟೋ ದರ ಏರಿಕೆಯಾಗಲಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಆಟೋ ದರ ಏರಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮೊದಲು ಆಟೋ ಚಾಲಕರು ಜಿಲ್ಲಾಧಿಕಾರಿಯವರಿಗೆ ಪ್ರಯಾಣ ದರ ಏರಿಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಮನವಿಯನ್ನು ಆಲಿಸಿದ ಡಿಸಿಯವರು ಅಸ್ತು ಎಂದಿದ್ದಾರೆ. 


ಆ.1ರಿಂದ ಆಟೋ ದರ ಏರಿಕೆಯಾಗಲಿದ್ದು, ಕೆಲವು ಸೂಚನೆಗಳನ್ನು ನೀಡಿದ್ದಾರೆ. ಈ ಪೈಕಿ ಆಟೋ ದರ ಏರಿಕೆ ಬಳಿಕ ಹೆಚ್ಚುವರಿ ಹಣವನ್ನು ಪಡೆಯುವಂತಿಲ್ಲ. ಒಂದು ವೇಳೆ ಹೆಚ್ಚುವರಿ ಹಣ ಪಡೆದರೆ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕನಿಷ್ಟ ಮೊದಲ 2 ಕಿ.ಮೀಗೆ 36 ರೂಪಾಯಿ, ನಂತರದ ಪ್ರತಿ ಕಿ.ಮೀಗೆ 18 ರೂಪಾಯಿ, ಮೊದಲ ಐದು ನಿಮಿಷ ಕಾಯುವಿಕೆ ಉಚಿತ,  ಪ್ರತಿ ಹದಿನೈದು ನಿಮಿಷ ಕಾಯುವಿಕೆ ದರ 10 ರೂಪಾಯಿ, 20 ಕೆ.ಜಿ ಲಗೇಜಿಗೆ ಉಚಿತ, 20 ಕೆ.ಜಿ ಗಿಂತ ಹೆಚ್ಚಿದ್ದರೇ 10 ರೂಪಾಯಿ ಲಗೇಜ್ ಶುಲ್ಕ, ರಾತ್ರಿ ವೇಳೆಯ ಪ್ರಯಾಣಕ್ಕೆ ಒಂದೂವರೆ ಪಟ್ಟು ದರ,  ರಾತ್ರಿ 10ರಿಂದ ಬೆಳಗಿನ ಜಾವ 5ಗಂಟೆಯವರೆಗೆ ಒಂದೂವರೆ ಪಟ್ಟು ದರ,  ಹೊಸ ದರ ಪಟ್ಟಿ ಆಟೋದ ಮೇಲೆ ಕಡ್ಡಾಯ ಹಾಕಬೇಕು ಮತ್ತು ಪರಿಷ್ಕೃತ ದರದ ಹೊಸ ಮೀಟರ್ ಆ.ಗಸ್ಟ್ 31ರೊಳಗೆ ಹಾಕಿಸಬೇಕು ಎಂದು ಸೂಚಿಸಲಾಗಿದೆ. 

Ads on article

Advertise in articles 1

advertising articles 2

Advertise under the article