
Dharmasthala: ಸರಣಿ ಶವಗಳ ಹೂತಿರುವ ಪ್ರಕರಣ; 3 ನೇ ಜಾಗದಲ್ಲೂ ಸಿಗದ ಕಳೇಬರ
30/07/2025
ಧರ್ಮಸ್ಥಳದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ತಂಡ ಮೂರನೇ ದಿನವೂ ತನಿಖೆ ಚುರುಕುಗೊಳಿಸಿದೆ.
ಜುಲೈ 30 ರಂದು 10 ಗಂಟೆಗೆ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ವಕೀಲರ ಜೊತೆ ದೂರುದಾರನನ್ನು ಕರೆ ತರಲಾಯಿತು. ಅಲ್ಲಿ ಕಚೇರಿ ಪ್ರಕ್ರಿಯೆಗಳನ್ನು ಮುಗಿಸಿದ ನಂತರ 11 ಗಂಟೆ ಸುಮಾರಿಗೆ ಎಸ್‌ಐಟಿ ತಂಡ ದೂರುದಾರನ ಜೊತೆ ಧರ್ಮಸ್ಥಳ ಸ್ನಾನಘಟ್ಟಕ್ಕೆ ಆಗಮಿಸಿದೆ. ಆತ ಗುರುತು ಮಾಡಿದ 2ನೇ ಜಾಗದಲ್ಲೂ ಶೋಧ ನಡೆಸಲಾಗಿದೆ. ಆದರೆ ಯಾವುದೇ ಕಳೇಬರ ಪತ್ತೆಯಾಗದ ಕಾರಣ 3ನೇ ಜಾಗದಲ್ಲೂ ಶೋಧ ಕಾರ್ಯ ನಡೆಸಲಾಯಿತು. ಆದರೆ ದೂರುದಾರ ತೋರಿಸಿದ 3ನೇ ಜಾಗದಲ್ಲೂ ಕಳೇಬರ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.