Mangalore:  7 ದಿನಗಳ ನಿರಂತರ ಭರತನಾಟ್ಯ; ಗಿನ್ನೆಸ್ ದಾಖಲೆಗೆ ಗೆಜ್ಜೆ ಕಟ್ಟಿದ ಕುಡ್ಲದ ಕುವರಿ

Mangalore: 7 ದಿನಗಳ ನಿರಂತರ ಭರತನಾಟ್ಯ; ಗಿನ್ನೆಸ್ ದಾಖಲೆಗೆ ಗೆಜ್ಜೆ ಕಟ್ಟಿದ ಕುಡ್ಲದ ಕುವರಿ



ಏಳು ದಿನಗಳ ಕಾಲ ನಿರಂತರ ನೃತ್ಯದೊಂದಿಗೆ 170 ಗಂಟೆ ಸತತ ಭರತ ನಾಟ್ಯ ಪ್ರದರ್ಶನದ ದಾಖಲೆಗೆ ಮಂಗಳೂರಿನ ರೆಮೊನಾ ಪಿರೇರಾ ಗೆಜ್ಜೆ ಕಟ್ಟಿದ್ದಾರೆ. ಹೌದು ಮಂಗಳೂರಿನ ಅಲೋಶಿಯಸ್ ಕಾಲೇಜಿನ ಅಂತಿಮ ಬಿ. ಎ ವಿದ್ಯಾರ್ಥಿನಿ ರೆಮೊನಾ ಪಿರೇರಾ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಲು ಪ್ರದರ್ಶನ ಆರಂಭಿಸಿದ್ದಾರೆ. 

ಜುಲೈ 21ರಂದು ಬೆಳಗ್ಗೆ 10.30ರಿಂದ ಸಂತ ಅಲೋಶಿಯಸ್ ಕಾಲೇಜಿನ ರಾಬರ್ಟ್ ಸಿಕ್ವೇರಾ ಹಾಲ್‌ನಲ್ಲಿ ಭರತನಾಟ್ಯ ಪ್ರದರ್ಶನ ಆರಂಭಿಸಿದ್ದು, ಜುಲೈ 28 ರವರೆಗೆ ನಿರಂತರವಾಗಿ ನಾಟ್ಯ ನಡೆಯಲಿದೆ. ಭರತನಾಟ್ಯದ ವಿವಿಧ ಪ್ರಕಾರಗಳಾದ ಅಲೆರಿಪ್ಪು, ಜತಿಸ್ವರಂ, ಶಬ್ದಂ, ವರ್ಣಂ, ಪದಂ, ತಿಲ್ಲಾನಗಳ ಜತೆಗೆ ಸೆಮಿಕ್ಲಾಸಿಕ್, ದೇವರ ನಾಮಗಳಿಗೆ ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ. 61 ಪದ್ಯಗಳನ್ನು 3 ಗಂಟೆಗಳಿಗೊ0ದರ0ತೆ ಜೋಡಿಸಲಾಗುತ್ತಿದೆ. ರಾತ್ರಿ ಹಗಲಿರುಳು ಎನ್ನದೇ ದಿನವಿಡೀ ಭರತನಾಟ್ಯ ಪ್ರದರ್ಶನ ನಡೆಯಲಿದ್ದು, ಪ್ರತೀ ಮೂರು ಗಂಟೆಗೊಮ್ಮೆ 15 ನಿಮಿಷಗಳ ಕಾಲ ಮಾತ್ರ ವಿರಾಮ ಇರುತ್ತದೆ. ರೆಮೊನಾ ಅವರು ಕಳೆದ 13 ವರ್ಷಗಳಿಂದ ಡಾ. ಶ್ರೀವಿದ್ಯಾ ಅವರಲ್ಲಿ ಭರತನಾಟ್ಯವನ್ನು ಕಲಿಯುತ್ತಿದ್ದಾರೆ. 


Ads on article

Advertise in articles 1

advertising articles 2

Advertise under the article