
Kaup: ಯುವನಿಧಿ ಯೋಜನೆ 2025; ನೊಂದಾವಣಿ ಪ್ರಕ್ರಿಯೆಯ ಪೋಸ್ಟರ್ ಬಿಡುಗಡೆ
25/07/2025
ಕರ್ನಾಟಕ ರಾಜ್ಯ ಸರ್ಕಾರವು ಬಡವರ ಮತ್ತು ಮಧ್ಯಮ ವರ್ಗಗಳ ಕಲ್ಯಾಣಕ್ಕಾಗಿ ವಿಶೇಷವಾಗಿ ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿ ಹಾಕಿಕೊಂಡ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯ 2025 ನೇ ಸಾಲಿನ ನೋಂದಾವಣಿ ಪ್ರಕ್ರಿಯೆಯ ಬಗ್ಗೆ ಪೋಸ್ಟರ್ ಬಿಡುಗಡೆಯು ಕಾಪುವಿನಲ್ಲಿ ನಡೆಯಿತು.
ಕಾಪು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಕಚೇರಿ, ಕಾಪು ತಹಶೀಲ್ದಾರರ ಕಚೇರಿ, ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಈ ಸಂಧರ್ಭ ಕಾಪು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಕಾಪು ತಹಶೀಲ್ದಾರ್ ಡಾ. ಪ್ರತಿಭಾ.ಆರ್, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗೋಪಾಲಕೃಷ್ಣ ಗಾಂವ್ಕರ್, ಉದ್ಯೋಗ ವಿನಿಮಯ ಕೇಂದ್ರದ ಸಿಬ್ಬಂದಿಗಳಾದ ಲತಾ, ಗೀತಾ, ಹಾಗೂ ಕಾಪು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಪ್ರಭಾಕರ ಆಚಾರ್ಯ, ಸುದೀರ್ ಎಸ್ ಕರ್ಕೇರ, ರೀನಾ ವಿನುತ ಡಿಸೋಜಾ , ಕೀರ್ತಿ ಕುಮಾರ್, ಕವಿತ , ರಾಜೇಶ್ ಕುಲಾಲ್, ಹಾಸನ್ ಬಾವಾ ಉಪಸ್ಥಿತರಿದ್ದರು.