Mangalore: ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ನಿಧನ; ಅನಾರೋಗ್ಯದಿಂದ ಮೃತ್ಯು
25/07/2025
ಬಹುಮುಖ ಪ್ರತಿಭೆ, ವಕೀಲೆ ರಾಜಶ್ರೀ ಜೆ. ಪೂಜಾರಿ ನಿಧನರಾಗಿದ್ದಾರೆ. ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜಶ್ರೀ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
Bilateral Joint Hip AVN -ಎನ್ನುವ ವೈದ್ಯಕೀಯ ತೊಂದರೆಗೆ ಒಳಗಾಗಿರುವುದರಿಂದ Bilateral Core Decompression ಎನ್ನುವ ಶಸ್ತ್ರಚಿಕಿತ್ಸೆಯನ್ನು ಮಾಡಬೇಕು ಎನ್ನುವ ವೈದ್ಯರ ಸಲಹೆಯಂತೆ ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ದಾಖಲಾಗಿದ್ದರು.
ಇದೀಗ ಚಿಕಿತ್ಸೆಗೆ ಸ್ಪಂಧಿಸದೇ ರಾಜಶ್ರೀ ಇಹಲೋಕ ತ್ಯಜಿಸಿದ್ದಾರೆ. ಬರಹಗಾರ್ತಿ, ಸಾಹಿತಿ, ನಿರೂಪಕಿ, ವಕೀಲೆ ಹೀಗೆ ನಾನಾ ಕ್ಷೇತ್ರಗಳಲ್ಲಿ, ವಿವಿಧ ಸಂಘ ಸಂಸ್ಥೆಗಳಲ್ಲಿ ರಾಜಶ್ರೀ ಸಕ್ರಿಯವಾಗಿದ್ದರು. ತನ್ನ ಸೌಮ್ಯ ಸ್ವಭಾವದಿಂದ ಬಹಳಷ್ಟು ಮಂದಿಗೆ ಆಪ್ತರಾಗಿದ್ದರು. ಅವರ ಪ್ರತಿಭೆಯನ್ನು ಗುರುತಿಸಿ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ.