Udupi: ವಿಂಟೇಜ್ ಎಝ್ಡಿ ಬೈಕುಗಳ ಪ್ರದರ್ಶನ; 25ಕ್ಕೂ ಅಧಿಕ ಪ್ರಾಚೀನ ಬೈಕುಗಳ ವಿಶೇಷ ಆಕರ್ಷಣೆ

Udupi: ವಿಂಟೇಜ್ ಎಝ್ಡಿ ಬೈಕುಗಳ ಪ್ರದರ್ಶನ; 25ಕ್ಕೂ ಅಧಿಕ ಪ್ರಾಚೀನ ಬೈಕುಗಳ ವಿಶೇಷ ಆಕರ್ಷಣೆ

ಮಣಿಪಾಲದಲ್ಲಿ 23ನೇ ಅಂತಾರಾಷ್ಟ್ರೀಯ ಜಾವಾ ದಿನಾಚರಣೆ ಅಂಗವಾಗಿ ನಡೆದ ಜಾವಾ ಕಂಪೆನಿಯ ವಿಂಟೇಜ್ ಎಝ್ಡಿ ಬೈಕುಗಳ ಪ್ರದರ್ಶನ ಮೋಟಾರು ಬೈಕು ಪ್ರಿಯರು ಹಾಗೂ ಪ್ರಾಚೀನ ವಾಹನ ಪ್ರಿಯರ ಗಮನ ಸೆಳೆಯಿತು. 


ಉಡುಪಿ ಜಾವಾ ಎಝ್ಡಿ ಮೋಟಾರ್ ಸೈಕಲ್ ಕ್ಲಬ್ ಹಾಗೂ ಮಣಿಪಾಲ ಆಟೋ ಕ್ಲಬ್ ವತಿಯಿಂದ ಮಣಿಪಾಲದ ಇಂಟರಾಕ್ಟ್ ಹಾಲ್ ಬಳಿ ನಡೆದ ಈ ಪ್ರದರ್ಶನದಲ್ಲಿ 25ಕ್ಕೂ ಅಧಿಕ ಪ್ರಾಚೀನ ಬೈಕುಗಳನ್ನು ಪ್ರದರ್ಶನಕ್ಕಿಡಲಾಗಿತ್ತು. 1973ರ ಮಾಡೆಲ್ ಎಝ್ಡಿ ಬೈಕು ವಿಶೇಷ ಆಕರ್ಷಣೆಯಾಗಿತ್ತು. 

ಈ ಪ್ರದರ್ಶನದಲ್ಲಿ ಹವ್ಯಾಸಿ ಯುವಕರ ವಿವಿಧ ಬ್ರಾಂಡ್ ಗಳ ಮೌಲ್ಡೆಡ್ ಮೀನಿಯೇಚರ್ ಕಾರು, ಬೈಕು, ವಿಮಾನಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿತ್ತು. ಮರ್ಸಿಡೀಸ್, ಒಡಿ, ಕಿಯಾ, ಸುಝುಕಿ ಮತ್ತಿತರ ಕಂಪೆನಿಗಳ ಅತ್ಯಾಧುನಿಕ ಕಾರುಗಳನ್ನೂ ಪ್ರದರ್ಶನಕ್ಕಿಡಲಾಗಿತ್ತು.







Ads on article

Advertise in articles 1

advertising articles 2

Advertise under the article