
Belthangady: ನಕ್ಸಲ್ ರೂಪೇಶ್ ಪೊಲೀಸ್ ಕಸ್ಟಡಿ ಅಂತ್ಯ; ಮತ್ತೆ ಕೇರಳ ಜೈಲಿಗೆ ರವಾನೆ
24/07/2025
ಮೂರು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದ ನಕ್ಸಲ್ ಚಳುವಳಿಯ ಪ್ರಮುಖ ನಾಯಕ ರೂಪೇಶ್ ಪಿ.ಆರ್ ಅವರನ್ನು ಬೆಳ್ತಂಗಡಿ ಕೋರ್ಟ್ಗೆ ಹಾಜರುಪಡಿಸಿ, ಮತ್ತೆ ಕೇರಳ ಜೈಲಿಗೆ ಕಳುಹಿಸಲಾಗಿದೆ.
ಜುಲೈ 22ರಂದು ಕೇರಳ ಜೈಲಿನಿಂದ ಬಾಡಿ ವಾರಂಟ್ ಮೂಲಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಮೂರು ದಿನಗಳ ಕಾಲ ಬೆಳ್ತಂಗಡಿ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. 2012ರ ಡಿಸೆಂಬರ್ 10ರಂದು ನಡೆದ ಗುಂಡಿನ ದಾಳಿಗೆ ಸಂಬ0ಧಿಸಿ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಬೊಳ್ಜೆ ಪ್ರದೇಶದಲ್ಲಿ ಮಹಜರು ನಡೆಸಿ, ತನಿಖೆ ನಡೆಸಿದ್ದರು.
ಜುಲೈ 24ರಂದು ರೂಪೇಶ್‌ನ ಪೊಲೀಸ್ ಕಸ್ಟಡಿ ಅವಧಿ ಪೂರ್ಣಗೊಂಡಿದ್ದು, ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದಲ್ಲಿ ಪೊಲೀಸರು ಭದ್ರತೆಯೊಂದಿಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ರೂಪೇಶ್‌ನನ್ನು ಹಾಜರುಪಡಿಸಿ, ಬಳಿಕ ಕೇರಳ ಜೈಲಿಗೆ ಕರೆದೊಯ್ದಿದ್ದಾರೆ.